'ಒಬಾಮ' ಪ್ರಕಾಶ್ ಹೇಮಾವತಿ ಅವರ ಕೃತಿಯಾಗಿದೆ. ’ಅಮೇರಿಕಾ ದೂರದ್ದು' ಎಂಬ ಪದವನ್ನು ಪಲ್ಲಟಗೊಳಿಸಿದಂತೆ ಲೇಖಕರ ಒಬಾಮ ಎಂಬ ಈ ಪುಟ್ಟ ಗ್ರಂಥ ಹೊರಹೊಮ್ಮಿದೆ. ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು, ತಂದೆ ತಾಯಿಗಳ ಕನ್ನಡ ಪ್ರೇಮವನ್ನು ಹೀರಿ ಹೆಮ್ಮರವಾದಂತೆ ಹರಿದಾಡಿವೆ ಇಲ್ಲಿಯ ವಿಚಾರ ಸರಣಿಗಳು, ಒಬಾಮ ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡು ಪ್ರಕಾಶ್ ಅಮೇರಿಕಾದ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ನೈಜಾನುಭವದಿಂದ ಚಿತ್ರಿಸಿದ ಇಲ್ಲಿನ ಘಟನಾವಳಿಗಳು ಜೀವಂತಿಕೆಯಿಂದ ತುಂಬಿಕೊಂಡು ಸಹಜ ಸುಂದರವಾಗಿ ತುಳುಕಾಡಿವೆ. ಒಮ್ಮೆ ಓದಲೆತ್ತಿಕೊಂಡರೆ ಮುಂದೆ ತಂತಾನೆ ಕರೆದುಕೊಂಡು ಹೋದಂತ ಲವಲವಿಕೆಯ ವಿಶಿಷ್ಟಾನುಭವವಾಗುವ ಪರಿಯೇ ಅನನ್ಯ ಎಂದು ಡಾ. ಮನು ಬಳಿಗಾರ್ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಮೂಲತಃ ಬೆಂಗಳೂರಿನವರಾಗಿದ್ದು ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಚರಿತ್ರೆಗಳ ಬಗೆಗೆ ಅಪಾರ ಅಸಕ್ತಿ ಬೆಳೆಸಿಕೊಂಡಿರುವ ಪ್ರಕಾಶ ಹೇಮಾವತಿಯವರು ಬೆಂಗಳೂರಿನ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಾಸ್ತುಶಿಲ್ಪ ಶಾಸ್ತದ ಪದವೀಧರರು. ಕಳೆದ ನಲವತ್ತು ವರುಷಗಳಿಂದಲೂ ಅಮೇರಿಕಾದಲ್ಲಿ ನೆಲೆಸಿರುವ ಇವರು ಇದುವರೆಗೆ ಕರ್ನಾಟಕ ಚರಿತ್ರೆಯ ಬಗೆಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇದರೊಂದಿಗೆ ಕಾದಂಬರಿ, ಕಥೆ, ಕವನ, ನಾಟಕಗಳನ್ನು ಸಹ ರಚಿಸಿದ್ದಾರೆ. ಹಲವು ನಾಟಕಗಳನ್ನು ಬರೆದು ಶಿಕಾಗೋ ಹಾಗೂ ಇನ್ನಿತರೆಡೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಕೃತಿಗಳು "ಅಮೋಘವರ್ಷ" , "ಒಬಾಮ", "ಇಮ್ಮಡಿ ಪುಲಿಕೇಶಿ". ...
READ MORE