ಲಕ್ಷ್ಮಣ ಕೌಂಟೆ ಅವರ ಆತ್ಮ ಕಥೆಯ ಒಂದು ಭಾಗ ಈ ಕೃತಿ. ಅವರು ತಮ್ಮ ಬದುಕಿನ ಅನುಭವ, ಕಹಿ ಸಿಹಿಗಳ ಸಮ್ಮಿಲನವನ್ನು ಇಲ್ಲಿ ಕ್ರೋಢಿಕರಿಸಿ ನೀಡಿದ್ದಾರೆ. “ನನ್ನಂಥ ಮಧ್ಯಮ ವರ್ಗದವರ ಬದುಕು ಎಂದೂ ಸರಳವಲ್ಲ. ಬದುಕಿನ ಬಂಡಿ ದಾರಿಯ ಮೇಲೆ ಇನ್ನೇನೋ ಸುಗಮವಾಗಿ ಸಾಗುತ್ತಿದೆ ಅನ್ನುವಷ್ಟರಲ್ಲಿಯೇ ನಾನೇ ಮುದ್ದಾಮಾಗಿ ಮಾಡಿಕೊಂಡ ಎಡವಟ್ಟುಗಳು ಮತ್ತೆ ಸಮಸ್ಯೆಗಳನ್ನು ತಂದಿಟ್ಟು ಅದನ್ನು ಕಠಿಣಗೊಳಿಸಿ ಬಿಡುತ್ತವೆ. ಹೀಗಾಗಿ, ನಾನು ಕಂಡ ಎಲ್ಲ ನೋವುಗಳ ಹಿಂದೆ ಯಾವ ದೈವದ ಕೈವಾಡವೂ ಇಲ್ಲ” ಎಂದು ಲೇಖಕರು ನೇರವಾಗಿ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE