ಫಾತಿಮಾ ಶೇಖ್

Author : ಕಾ.ಹು ಚಾನ್ ಪಾಷ

Pages 96

₹ 80.00




Year of Publication: 2021
Published by: ಪೂರ್ಣ ದೃಷ್ಠಿ ಪ್ರಕಾಶನ
Address: ಕಾ.ಹು ಚಾನ್ ಪಾಷ, #15,ಭಾರತ ಪಾಳಿಟೆಕ್ನಿಕ್ ಎದುರು, ಕೆ. ಜಿ.ಎಫ್ ಮುಖ್ಯ ರಸ್ತೆ ಬಂಗಾರಪೇಟೆ- 563162, ಕೋಲಾರ ಜಿಲ್ಲೆ
Phone: 7019938385

Synopsys

‘ಫಾತಿಮಾ ಶೇಖ್ ; ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಮೂಲತಃ ತೆಲುಗು (ಮೂಲ ಲೇಖಕ ಸೈಯದ್ ನಸೀರ್ ಅಹ್ಮದ್) ಕೃತಿಯಾಗಿದ್ದು ಕಾ. ಹು. ಚಾನ್ ಪಾಷ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಮ್ಮ ದೇಶದಲ್ಲಿ ಶೂದ್ರರು, ಅಸ್ಪ್ರಶ್ಯರೆಂದು ವಿಭಜಿಸಲ್ಪಟ್ಟು ವಿದ್ಯೆಗೆ ದೂರವಾಗಿರುವ ಸಾಮಾಜಿಕ ವರ್ಗಗಳನ್ನು ವಿದ್ಯಾಂವತರನ್ನಾಗಿ ಮಾಡಬೇಕೆಂದು ಹೋರಾಡಿದ ಮಹಾತ್ಮ ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ದಂಪತಿಯ ಹೋರಾಟದ ಆರಂಭದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ದಿಟ್ಟ ಮಹಿಳೆ ಫಾತೀಮಾ ಷೇಕ್. ಇವರು ಜ್ಯೋತಿಬಾ ಫುಲೆ ಆರಂಭಿಸಿದ ಸಾಮಾಜಿಕ ಚಳವಳಿಯಲ್ಲಿ ಭಾಗಿಯಾದ ಸಾಮಾಜಿಕ ಚಳವಳಿಗಾರ್ತಿ, ಹೆಣ್ಣುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಕಂಕಣ ಕಟ್ಟಿಕೊಂಡ ಸಾವಿತ್ರಿಬಾಯಿ ಫುಲೆಯ ಗೆಳತಿ. ವಿದ್ಯಾರ್ಜನೆಯಿಂದಾಗುವ ಉಪಯೋಗಗಳನ್ನು ಮನೆಮನೆಗೂ ಪ್ರಚಾರ ಮಾಡಿದ ಶೇಖ್, ಈ ಆಲೋಚನೆಯಿಂದ ಹೆಜ್ಜೆಯಿಟ್ಟ ಅಪರೂಪದ ವಿದ್ಯಾವಂತೆ. ಭಾರತದ ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕ ತರಬೇತಿ ಪಡೆದು ವಿದ್ಯಾಬೋಧನೆಗೆ ಅರ್ಹಳಾದ ಮೊಟ್ಟಮೊದಲ ಮುಸ್ಲಿಂ ಮಹಿಳೆ. ವಿದ್ಯಾಬೋಧನೆ ಮಾಡಿದ ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ. ಮಹಾತ್ಮ ಜ್ಯೋತಿಬಾ ಫುಲೆ ಸ್ಥಾಪಿಸಿದ ಶಾಲೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ನಡೆಸಿದ ಮುಸ್ಲಿಂ ಶಿಕ್ಷಕಿ ಫಾತೀಮಾ ಷೇಕ್ ಎನ್ನುವಂತಹ ಹಲವಾರು ವಿಚಾರಗಳನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ. 

About the Author

ಕಾ.ಹು ಚಾನ್ ಪಾಷ

ಕವಿ-ಲೇಖಕ ಕಾ.ಹು ಚಾನ್ ಪಾಷ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಕೋಲಾರದ ಆಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರು. ತೆಲುಗು ಭಾಷೆಯಿಂದ ಕನ್ನಡಕ್ಕೆ ಹಲವಾರು ಕತೆ, ಕವನಗಳನ್ನು ಅನುವಾದ ಮಾಡಿದ್ದಾರೆ. ಕೃತಿಗಳು: ಮನದ ಮಲ್ಲಿಗೆ(ಚುಟುಕು ಸಂಕಲನ), ಜನ ಮರುಳೋ! ಜಾತ್ರೆ ಮರುಳೋ (ಕಥಾ ಸಂಕಲನ), ಭಲೇ! ಗಿಣಿರಾಮ’, ಮೂರು ವರಗಳು (ಮಕ್ಕಳ ನಾಟಕ), ಸಲೀಂ ಅವರ ಕತೆಗಳು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಸಾಹಿತಿ ಸಲೀಂ ಅವರ ಸಮಗ್ರ ಕತಾ ಸಾಹಿತ್ಯದಲ್ಲಿನ ಮುಸ್ಲಿಂ ಸಂವೇದನೆಯ ಕತೆಗಳು)  ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ...

READ MORE

Related Books