ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿದ್ದ ಅಪೂರ್ವ ವಿದ್ವತ್ ಪ್ರತಿಭೆ ಪೆರಡಾಲ ಕೃಷ್ಣಯ್ಯ. ಶಾಲೆಯೊಂದರಲ್ಲಿ ಕನ್ನಡ ಪಂಡಿತರಾಗಿದ್ದುಕೊಂಡು ನೂರಾರು ಕನ್ನಡ ಪ್ರತಿಭೆಗಳನ್ನು ಕನ್ನಡ ವಿದ್ವಾನ್ ಪದವಿಗೆ ತರಬೇತುಗೊಳಿಸಿದ ಮಹಾಗುರು. ಹಿರಿಯ ಕವಿ ಕಯ್ಯಾರ ಕಿಞ್ಞಣ್ಣ ರೈ, ಅಮ್ಮೆಂಬಳ ಶಂಕರನಾರಾಯಣ ನಾವಡ, ಗದಾಯುದ್ಧ ದರ್ಪಣಂ ಖ್ಯಾತಿಯ ಪ್ರೊ. ಸುಬ್ರಾಯ ಭಟ್, ಬಹುಭಾಷಾ ಯಕ್ಷಗಾನ ಕವಿ ಡಾ. ಡಿ. ಸದಾಶಿವ ಭಟ್ ಹೀಗೆ ಅನೇಕ ವಿದ್ವಾಂಸರನ್ನು ಬೆಳೆಸಿದ ಆಚಾರ್ಯ ಪ್ರತಿಭೆ. ಕವಿಯಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಅಧ್ಯಾಪಕರಾಗಿ ಕನ್ನಡಕ್ಕೆ ಬಹುಮುಖ್ಯ ಕೊಡುಗೆಯನ್ನು ಕೊಟ್ಟ ಎಲೆಮರೆಯ ಕಾಯಿಯಂತಿದ್ದ ಕರಾವಳಿಯ ವಿದ್ವತ್ ಮಾನ್ಯರು. ಶ್ರೀಯುತರ ಬಗ್ಗೆ ಕಾಂತಾವರದ ಕನ್ನಡ ಸಂಘವು ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ವರದರಾಜ ಚಂದ್ರಗಿರಿ ಅವರ ಕೃತಿ.
ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಡಾ. ವರದರಾಜ ಚಂದ್ರಗಿರಿ ಅವರು ಖ್ಯಾತ ಸಾಹಿತಿ, ಚಿಂತಕರಾಗಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪರಿಚಿತರಾಗಿದ್ದಾರೆ. ಅವರು ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾಗಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ...
READ MORE