ಗಣಿತ ಸಂವತ್ಸರದ ಅಂಗವಾಗಿ (2012) ನವಕರ್ನಾಟಕ ಪ್ರಕಾಶನವು ಜಿ.ಟಿ. ನಾರಾಯಣ ರಾವ್ ಅವರು ಬರೆದ ಕೃತಿ-ಶ್ರೀನಿವಾಸ ರಾಮಾನುಜನ್’ ಪ್ರಕಟಿಸಿದೆ. ಈ ವಿಜ್ಞಾನಿಯ ಜೀವನ ಹಾಗೂ ವೈಜ್ಞಾನಿಕ ಸಂಶೋಧನೆ ಹಾಗೂ ಸಾಧನೆಗಳ ಕಿರು ಚಿತ್ರಣ ನೀಡಲಾಗಿದೆ. ಮಕ್ಕಳ ದೃಷ್ಟಿಯಿಂದ ಈ ಕೃತಿಯು ಪ್ರೇರಣಾದಾಯಕವಾಗಿದೆ. ಭಾಷೆ ಸರಳವಾಗಿದ್ದು, ಕ್ಲಿಷ್ಟವಾದ ಗಣಿತದ ಸಿದ್ಧಾಂತಗಳನ್ನು, ಇವರ ಸಾಧನೆಗಳನ್ನು ಸರಳವಾಗಿ ವಿವರಿಸಲಾಗಿದೆ. ಆ ಮೂಲಕ, ವಿಜ್ಞಾನಿಯ ದೃಷ್ಟಿಕೋನ, ಸಾಧನೆಯ ಎತ್ತರವನ್ನು ಕಾಣಿಸಲಾಗಿದೆ.
ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...
READ MORE