‘ಚಂದ್ರಶೇಖರ ಆಜಾದ್’ ಎಸ್. ಪಟ್ಟಾಭಿರಾಮ ಅವರು ಮಕ್ಕಳಿಗಾಗಿ ಬರೆದ ಜೀವನ ವಿತ್ಚಂರದ ಕೃತಿ. ಬ್ರಿಟಿಷರನ್ನು ದಿಟ್ಟತನದಿಂದ ಆಜಾದ್ ಅವರ ಜೀವನ ಚಿತ್ರಣವನ್ನು ಬಣ್ಣದ ಚಿತ್ರಗಳೊಂದಿಗೆ ನೀಡಲಾಗಿದೆ. ವಸಂತ ಪ್ರಕಾಶನ ಮಕ್ಕಳಿಗಾಗಿ ದೇಶ-ವಿದೇಶಗಳ ಸ್ವಾರಸ್ಯ ಕಥೆಗಳು ಎಂಬ ಮಾಲೆಯಲ್ಲಿ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದೆ. ಅದೇ ಮಾಲಿಕೆಯಲ್ಲಿ ಪ್ರಕಟವಾದ ಈ ಕೃತಿ, ಮಕ್ಕಳಲ್ಲಿ ಸ್ವಾಭಿಮಾನ ಮತ್ತು ಪ್ರಾಮಾಣಿಕತೆಯನ್ನು ತುಂಬುತ್ತದೆ.
ಎಸ್. ಪಟ್ಟಾಭಿರಾಮನ್ ಹಿರಿಯ ಪತ್ರಕರ್ತರು. ಮೈಸೂರಿನವರಾದ ಎಸ್. ಪಟ್ಟಾಭಿರಾಮನ್ ಅವರು ಚಾಮರಾಜನಗರದ ಸರಗೂರಿನಲ್ಲಿ 1934 ರಲ್ಲಿ ಜನಿಸಿದರು. ಇವರು ಪತ್ರಿಕೋದ್ಯಮ ಎಂ.ಎ ಮುಗಿಸಿ, ಪ್ರಜಾವಾಣಿ ಮೈಸೂರು ಪತ್ರಿಕೆಯಲ್ಲಿ 25 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಾದೇಶಿಕ ವಿಶೇಷ ವರದಿಗಾರರಾಗಿ ಹತ್ತು ವರ್ಷ ಕಾರ್‍ಯ ನಿರ್ವಹಿಸಿದ್ದಾರೆ. ಸುಮಾರು 45 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೃಷಿ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿದೆ. ಭಾರತ ಸೇವಾದಳ, ರಾಷ್ಟ್ರೀಯ ಅಂಧರ ಒಕ್ಕೂಟದಂಥ ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಶೈಕ್ಷಣಿಕ ಸಾಮಾಜಿಕ ಸಂಘ ಸಂಸ್ಥೆಗಳ ಕ್ರಿಯಾಶೀಲ ...
READ MORE