`ಬಸವಣ್ಣ' ಜೀವನಚರಿತ್ರೆ ಯ ಈ ಪುಸ್ತಕವನ್ನು ಲೇಖಕ ಸ.ಸ. ಮಾಳವಾಡ ಅವರು ರಚಿಸಿದ್ದಾರೆ. 800 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಇಂದಿನ ಬಸವನ ಬಾಗೇವಾಡಿ ತಾಲೂಕಿನ ಬಾಗೇವಾಡಿಯಲ್ಲಿ ಹುಟ್ಟಿದ ಕ್ರಾಂತಿ ಪುರುಷರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಸಾರಿ, ಹೊನ್ನಶೂಲ ಎಂದು ಹೊಗಳಿಕೆಯನ್ನು ದೂರವಿಟ್ಟು ಕೂಡಲಸಂಗಮ ದೇವನಿಗೆ ಸರ್ವಾರ್ಪಣೆ ಮಾಡಿಕೊಂಡರು. ಶುಭ್ರಜೀವನ, ಸಮತಾಭಾವ, ಕಾಯಕಗಳ ಆದರ್ಶಗಳನ್ನು ಸಾರಿದರು, ಅವನ್ನೆ ಆಚರಿಸಿ ಬಾಳಿದರು. ಶತಮಾನಗಳನ್ನು ಗೆದ್ದು ಬೆಳಗುವ ಜ್ಯೋತಿಯಾದ ಬಸವಣ್ಣನವರ ಜೀವನದ ಮುಖ್ಯ ಘಟನೆಗಳ ಬಗೆಗೆ ಸವಿಸ್ತಾರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಒಂದು ಸಮಾಜ ಹೇಗಿರಬೇಕೆಂಬುದಕ್ಕೆ ಬಸವಣ್ಣನವರ ವಚನಗಳೇ ಪ್ರೇರಣಾದಾಯಕ. ವಚನಗಳ ಹಾಗೇ ಬದುಕಿದರು ಬಸವಣ್ಣನವರು. ಹಾಗಾಗಿ, ಅವರ ಜೀವನದ ಪ್ರಮುಖ ಹಂತಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.
ಸಾಹಿತಿ ಸ.ಸ. ಮಾಳವಾಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ. ತಂದೆ ಸಂಗನ ಬಸಪ್ಪ, ತಾಯಿ- ಕಾಳಮ್ಮ. ಪ್ರಾರಂಭಿಕ ಶಿಕ್ಷಣವನ್ನು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ಪಡೆದರು. ಧಾರವಾಡದಲ್ಲಿ ಎಂ.ಎ. ಪದವಿ ಪಡೆದರು. ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ‍್ಯರಾಗಿ, ನಿವೃತ್ತರಾದರು. ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಪರರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ‘ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ’ ...
READ MORE