ತಮಿಳು ಭಾಷೆಯಲ್ಲಿ ತಿರುಕ್ಕುರಳ್ ಎಂಬ ಕೃತಿ ರಚಿಸಿದ ತಿರುವಳ್ಳುವರ್ ಕುರಿತು ಲೇಖಕ ಪರಂಜ್ಯೋತಿ (ಕೆ.ಪಿ.ಸ್ವಾಮಿ) ಅವರು ರಚಿಸಿದ ಕೃತಿ-ತಿರುವಳ್ಳುವರ್. ಕನ್ನಡ ಸಾಹಿತ್ಯಕ್ಕೆ ಸರ್ವಜ್ಞ ಹೇಗೋ ಹಾಗೆ ತಮಿಳು ಸಾಹಿತ್ಯದಲ್ಲಿ ತಿರುವಳ್ಳುವರ್ ಅವರ ಹೆಸರು ಪ್ರಸಿದ್ಧ. ಸರ್ವಜ್ಞನು ತ್ರಿಪದಿಗಳನ್ನು ಬರೆದ ಹಾಗೆ ತಮಿಳು ಭಾಷೆಯಲ್ಲಿಯ ತ್ರಿಪದಿಗಳು ತುಂಬಾ ಜನಪ್ರಿಯವಾಗಿವೆ. ಸಾಮಾನ್ಯ ಜನಭಾಷೆಯಲ್ಲಿ ರಚಿಸಿದ ಈ ತ್ರಿಪದಿಗಳು ಬದುಕಿನ ಅರ್ಥ, ಸಾರ್ಥಕತೆಯನ್ನು ಧ್ವನಿಸುತ್ತವೆ. ಸಮಾಜದಲ್ಲಿಯ ಆರೋಗ್ಯಕಾರಿ ಅಂಶಗಳತ್ತ ಗಮನ ಸೆಳೆಯುತ್ತವೆ. ಈ ಕೃತಿಯನ್ನು ಡಾ. ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.
ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...
READ MORE