ಭೀಷ್ಮ ಉವಾಚ ವ್ಯಕ್ತಿ ಚಿತ್ರಣ ಪುಸ್ತಕವನ್ನು ಲೇಖಕ ಎನ್.ಕೆ. ನರಸಿಂಹಮೂರ್ತಿ ಅವರು ರಚಿಸಿದ್ದಾರೆ. ಶರಶಯ್ಯೆಯಲ್ಲಿ ಮಲಗಿದ್ದಾಗ ಅವರ ಜ್ಞಾನಸಂಪತ್ತು ನಷ್ಟವಾಗುವುದು ಶ್ರೀಕೃಷ್ಣನಿಗೆ ಸರಿಕಾಣಲಿಲ್ಲ. ಭೀಷ್ಮ ಪಿತಾಮಹರ ಅನುಭವದ ಜ್ಞಾನವು ಯುಧಿಷ್ಠಿರನಿಗೆ ದೊರೆಯುವಂತೆ ಏರ್ಪಡಿಸಿದ ಶ್ರೀಕೃಷ್ಣ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರು ಧರ್ಮರಾಯನಿಗೆ ’ರಾಜಧರ್ಮವನ್ನು ವಿಸ್ತಾರವಾಗಿ ಉಪದೇಶಿಸಿದರು. ಅದರಿಂದ ಆರಿಸಿದ ಶ್ಲೋಕಗಳ ಸಂಗ್ರಹ- ’ಭೀಷ್ಮ ಉವಾಚ’. ರಾಜ್ಯಾಡಳಿತ ನಡೆಸುವಲ್ಲಿ ಯಾವಯಾವ ಕರ್ತವ್ಯಕ್ಕೆ ಎಂಥೆಂಥ ಗುಣಸ್ವಭಾವಗಳು ಅಗತ್ಯ ಎಂಬುದರ ಸೂಚನೆ ಈ ಪುಸ್ತಕದಲ್ಲಿದೆ.