ಸಯ್ಯಾಜಿರಾವ್ ಗಾಯಕವಾಡ ಜೀವನ ಚರಿತ್ರೆ ಪುಸ್ತಕವನ್ನು ಲೇಖಕ ಕೊರಟಿ ಶ್ರೀನಿವಾಸರಾವ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತ ಸ್ವತಂತ್ರವಾಗುವ ಮೊದಲು ಬರೋಡ ಸಂಸ್ಥಾನವನ್ನಾಳಿದ ಮಹಾರಾಜರು, ಹಿಂದುಳಿದಿದ್ದ ರಾಜ್ಯವನ್ನು ಪ್ರಗತಿಯ ದಾರಿಯಲ್ಲಿ ನಡೆಸಿದರು. ಸ್ವತಂತ್ರ ಭಾರತದ ಕನಸನ್ನು ಕಂಡರ ಎಂದು ಸಯ್ಯಜಿರಾವ್ ಗಾಯಕವಡ ಅವರ ಕುರಿತು ವಿವರಿಸಲಾಗಿದೆ.ಬ್ರಿಟಿಷರ ಆಳ್ವಿಕೆಯ ಸಮಯದಲ್ಲೂ ತನ್ನ ಸಂಸ್ಥಾನವನ್ನು ಕೊಂಡೊಯ್ದ ರೀತಿ, ಜನಪರ ಸೇವೆ, ಬಾಲ್ಯ ಜೀವನ, ಬದುಕಿನ ಏಳು-ಬೀಳುಗಳಯ ಹೀಗೆ ಸಯ್ಯಜಿರಾವ್ ಗಾಯಕವಡ ಅವರ ಬದುಕಿನ ವಿವಿಧ ಆಯಾಮಗಳನ್ನು ಲೇಖಕರು ಇಲ್ಲಿ ಸರಳ ಕನ್ನಡ ಭಾಷೆಯಲ್ಲಿ ಚಿತ್ರಿಸಿದ್ದಾರೆ.
ಶ್ರೀನಿವಾಸರಾವ್ ಅವರು ಕನ್ನಡದ ಪ್ರಸಿದ್ದ ಕಾದಂಬರಿಕಾರರು. ಶ್ರೀಪಾದರಾವ್ ಮತ್ತು ನಾಮಗಿರಿಯಮ್ಮನವರ ಪುತ್ರನಾಗಿ ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರಲ್ಲಿ ಜನಿಸಿದರು. ಹೊಸಕೋಟೆ, ಬೆಂಗಳೂರುಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ, ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ...
READ MORE