ಲೇಖಕ ಎನ್.ಎಸ್. ಶ್ರೀಧರಮೂರ್ತಿ ಅವರು ಬರೆದಿರುವ ಜೀವನಚಿತ್ರ ‘ಭಾರತೀಯ ಸಾಹಿತ್ಯ ನಿರ್ಮಾಪಕರು ಎಲ್.ಎಸ್. ಶೇಷಗಿರಿರಾವ್ ’. ಕೃತಿಯಲ್ಲಿ ಲೇಖರೇ ಹೇಳಿರುವ ಮಾತಿನಂತೆ, ಪ್ರೊ.ಎಲ್.ಎಸ್. ಶೇಷಗಿರಿ ರಾಯರು ಕನ್ನಡದ ಅಗ್ರಶ್ರೇಣಿಯ ಚಿಂತಕರು ಮತ್ತು ವಿಮರ್ಶಕರು. ಬಹಳ ಮುಖ್ಯವಾಗಿ ಅಪ್ಪಟ ಕನ್ನಡ ಪ್ರೇಮವನ್ನು ಹೊಂದಿದ್ದವರು. ಅವರ ಜೊತೆಗೆ ನನಗೆ ಸರಿಸುಮಾರು ಮೂರು ದಶಕಗಳ ಒಡನಾಟ. ಅವರ ಬರಹ ಎಷ್ಟು ಉನ್ನತವೋ ಬದುಕೂ ಕೂಡ ಃಆಗೆ. ನಂಬಿದ ತತ್ವಗಳಿಗೆ ನಿಷ್ಟವಾಗಿ ಬದುಕಿದವರು ಅವರು. ಈ ಚಿಕ್ಕ ಖೃತಿಯಲ್ಲಿಅವರ ಬರಹಗಳನ್ನೆಲ್ಲಾ ಮೌಲ್ಯಮಾಪನ ಮಾಡುವುದು ಕಷ್ಟ. ನಾನು ಮುಖ್ಯವಾದ ನೆಲೆಗಳನ್ನು ಹಿಡಿಯುವ ಮೂಲಕ ಅವರ ಬರಹದ ವ್ಯಾಪ್ತಿಯನ್ನು ಗುರುತಿಸುವ ಪ್ರಯತ್ನವನ್ನು ಮಾಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಕೃತಿಯ ಅನುಕ್ರಮಣಿಕೆಯಲ್ಲಿ 6 ವಿಭಾಗಗಳಿದ್ದು, ಜೀವನ ಪಥ, ಸೃಜನ ಸಾಹಿತ್ಯ ಮತ್ತು ವ್ಯಕ್ತಿಚಿತ್ರಗಳು, ಸಾಹಿತ್ಯ ಚರಿತ್ರೆಕಾರರಾಗಿ ಶೇಷಗಿರಿ ರಾವ್, ವಿಮರ್ಷಕರಾಗಿ ಶೇಷಗಿರಿ ರಾಯರು, ಶೇಷಗಿರಿ ರಾಯರ ನಿಘಂಟುಗಳು ಹೀಗಿವೆ.
ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು 'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...
READ MORE