ಮಂಜುನಾಥ ಗೋವಿಂದವಾಡ

Author : ನಿಷ್ಠಿ ರುದ್ರಪ್ಪ

Pages 106

₹ 150.00




Year of Publication: 2019
Published by: ಕವನ ಪ್ರಕಾಶನ
Address: ಕೊಟ್ಟೂರು, ತಾಲ್ಲೂಕು ಕೂಡ್ಲಗಿ, ಜಿಲ್ಲೆ: ಬಳ್ಳಾರಿ.

Synopsys

ಲೇಖಕ ನಿಷ್ಠಿ ರುದ್ರಪ್ಪ ಅವರು ಉದಯೋನ್ಮುಖ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಜೀವನ ಹಾಗೂ ಚಿತ್ರಕಲೆ ರಂಗದಲ್ಲಿ ತೋರಿದ ಸಾಧನೆ-ಸಿದ್ಧಯನ್ನು ಕುರಿತು ಬರೆದ ಕೃತಿ ಇದು. ಈ ಕಲಾವಿದರ ಚಿತ್ರಗಳೊಂದಿಗೆ ಪ್ರಕಟಿಸಿದ ಈ ಕೃತಿಯು ಒಬ್ಬ ಕಲಾವಿದನಿಗೆ ಸಲ್ಲಿಸಿದ ಅಪೂರ್ವ ಗೌರವವೂ ಇದಾಗಿದೆ. ಸಮಕಾಲೀನ ಸಮಾಜದ ಉತ್ತಮ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸವಿದು. ಬಡತನದಲ್ಲಿ ಬೆಳೆದ ಮಂಜುನಾಥ ಗೋವಿಂದವಾಡ ಅವರು ತಮ್ಮ ಜೀವನದ ಅನಿವಾರ್ಯತೆಯಾಗಿ ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡು, ಅದನ್ನೇ ಜೀವನದ ಬದ್ಧತೆಯಾಗಿ ಸ್ವೀಕರಿಸಿದ ಕಲಾವಿದ. ಅವರ ಚಿತ್ರಕಲೆಯು ಕನಸ್ಸಿಗೆ ಮುದ ನೀಡುವುದಷ್ಟೇ ಅಲ್ಲ; ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುವ ಕೆಲಸ ಮಾಡಿದೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books