ವಿ.ಕೃ. ಗೋಕಾಕ್ (ಜೀವನ ದರ್ಶನ)

Author : ಎನ್ಕೆ (ಎನ್‌.ಕೆ. ಕುಲಕರ್ಣಿ)

Pages 32

₹ 25.00




Year of Publication: 2020
Published by: ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್
Address: ಬೆಂಗಳೂರು

Synopsys

ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯ ಗರಿಮೆಯನ್ನು ತೊಡಿಸಿದ ವಿನಾಯಕ ಕೃಷ್ಣ ಗೋಕಾಕರು `ವಿ.ಕೃ.ಗೋಕಾಕ್' ಎಂದೇ ಪರಿಚಿತರು. ಅವರ ಬಾಲ್ಯ-ಜೀವನ-ಸಾಧನೆ-ಸಾಹಿತ್ಯದ ನಂಟು-ಕೃತಿಗಳ ಕುರಿತ ಒಂದು ಸಂಕ್ಷಿಪ್ತ ಒಳನೋಟ ಹಾಗೂ ಅವರ ಜೀವನಾಶಯವನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ ಲೇಖಕ ಎನ್ಕೆ. 

About the Author

ಎನ್ಕೆ (ಎನ್‌.ಕೆ. ಕುಲಕರ್ಣಿ)
(29 August 1913 - 23 April 2005)

ಎನ್ಕೆ (ಎನ್‌.ಕೆ. ಕುಲಕರ್ಣಿ) ಅವರು ಎನ್.ಕೆ , ಎಂದೇ ಸುಪ್ರಸಿದ್ಧರಾದ ಎ.ಕೆ.ಕುಲಕರ್ಣಿಯವರು, 1913 ರ ಆಗಸ್ಟ್ 29 ರಂದು ಗದುಗಿನಲ್ಲಿ ಜನಿಸಿದರು.  ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ .(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು.1938 ರಲ್ಲಿ ಕನ್ನಡ  ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಪಡೆದರು. 1940 ರಲ್ಲಿ ಬಿ.ಟಿ. ಪದವಿ ಪಡೆದರು.  1943 ರಿಂದ 1946 ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. 1971 ರಲ್ಲಿ  ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. ಸಾವಿನ ಉಡಿಯಲ್ಲಿ, ಎರಡನೆಯ ...

READ MORE

Related Books