‘ಪ್ರತಿಮಾ ಲೋಕದಲ್ಲಿ ಪಯಣ’ ಶ್ರೇಷ್ಠ ಕಲಾವಿದ ಕೆ.ಕೆ. ಹೆಬ್ಬಾರ್ ಅವರ ಜೀವನ ಚಿತ್ರಣ. ಕಲಾವಿದರೂ, ಲೇಖಕರೂ ಆದ ಎನ್. ಮರಿಶಾಮಾಚಾರ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಸಾಮಾನ್ಯ ನೆಲೆಯಿಂದ ಹೊರಟ ಕಲಾವಿದನೊಬ್ಬ ಬದುಕಿನುದ್ದಕ್ಕೂ ಸತತ ಹೋರಾಟ ನಡೆಸುತ್ತಲೇ ಸಿದ್ದಿ ಪಡೆದು, ಅಸಾಧಾರಣವಾದ ಗುರಿಮುಟ್ಟಿ ವಿಶ್ವದ ವರ್ಣಚಿತ್ರ ಕಲೆಯಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ ದೊರಕಿಸಿಕೊಟ್ಟ ಹಿರಿಮೆ.
ಅದರ ಜೊತೆಗೆ, ಭಾರತದ ಕಲಾ ಜಗತ್ತಿನ ಇತಿಹಾಸದ ಪುಟಗಳಲ್ಲಿ ಜಾಗ ಪಡೆದ ಯಶೋಗಾಥೆಯನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಸೃಜನಶೀಲ ಕಲಾಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹೆಬ್ಬಾರರು, ಕಲೆಯಲ್ಲಿ ಸದಾ ಅನ್ವೇಷಕರು. ಹಲವು ಮಜಲುಗಳನ್ನು ಮುಟ್ಟಿ ಎತ್ತರಕ್ಕೆ ಏರಿದ್ದರೂ ತಮ್ಮ ಕಲೆಯ ಬಗ್ಗೆ ಸದಾ ಅವರು ಹೇಳುತ್ತಿದ್ದ ಮಾತು ‘ನಾನು ನಿರಂತರ ಶೋಧಕ. ನನ್ನ ಶೋಧ ಎಂದಿಗೂ ಮುಗಿಯದು’
ಕಲಾವಂತಿಕೆಯನ್ನು ಅರಿಯುವುದಕ್ಕೆ ಹೆಬ್ಬಾರ್ ಎಂಬುದೇ ಮಾನದಂಡ ಎಂಬುವಂತೆ ಬೆಳೆದವರು. ಅಂತಹ ಮೇರು ಪರ್ವತದ ಬದುಕು, ಕಲೆ , ಸಾಧನೆಗಳ ಮೇಲೆ ಬೆಳಕು ಬೀರುವ ಕೃತಿ ಇದು.
ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್ ಅವರು ಜಯನಗರದ ಆರ್.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...
READ MORE