ಶಿರಹಟ್ಟಿ ಶ್ರೀ ಎಚ್. ವೆಂಕೋಬರಾಯರು

Author : ಆರ್. ಬಿ. ಬಾಳೆಹೊಸೂರ

Pages 66




Year of Publication: 1970
Published by: ಸಂಗೀತ ನಾಟಕ ಅಕಾಡೆಮಿ
Address: ರವೀಂದ್ರ ಕಲಾಕ್ಷೇತ್ರ, ಜೆ. ಸಿ ರಸ್ತೆ, ಬೆಂಗಳೂರು 560004

Synopsys

ಸಂಗೀತ ನಾಟಕ ಅಕಾಡೆಮಿ ಪ್ರಕಟಿಸಿರುವ ’ಕನ್ನಡ ಕಲಾವಿದ ಜೀವನ ಚರಿತ್ರಮಾಲಾ’  ಸರಣಿಯ ಪುಸ್ತಕವಾದ ’ ಶಿರಹಟ್ಟಿ ಶ್ರೀ. ಎಚ್. ವೆಂಕೋಬರಾಯರು’ ಪುಸ್ತಕವನ್ನು ಲೇಖಕರಾದ ಆರ್‍. ಬಿ. ಬಾಲೆಹೊಸೂರ ಅವರು ರಚಿಸಿದ್ದು,  ಸಾಹಿತಿ, ಅ.ನ ಕೃಷ್ಣರಾಯರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ.

 ಶಿರಹಟ್ಟಿಯ ಶ್ರೀ ಎಚ್. ವೆಂಕೋಬರಾಯರು ನಾಟಕ ಕಲಾವಿದರಾಗಿದ್ದು, ಶಿರಹಟ್ಟಿಯ ನಾಟಕ ಕಂಪನಿಯ ಒಡೆಯರೂ ಆಗಿದ್ದರು. ವೆಂಕೋಬರಾಯರು ನಾಟಕ ಕಂಪನಿಯನ್ನು 20ನೇ ಶತಮಾನದ ಆರಂಭದ ಕಾಲದಲ್ಲಿ ಕಟ್ಟಿದರು. ಮರಾಠಿ ನಾಟಕಗಳ ಪ್ರಭಾವದ ಕಾರಣದಿಂದಾಗಿ ಕನ್ನಡ ಭಾಷೆ ಮತ್ತು ಕನ್ನಡ ರಂಗಭೂಮಿಯ ಬಗೆಗೆ ಕನ್ನಡ ಜನಗಳಲ್ಲಿ ಆಸಕ್ತಿ ಅಭಿಮಾನ ಕಂಡುಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ಕಂಕಣಬದ್ಧರಾಗಿ ಕನ್ನಡ ನಾಟಕ ಕಂಪನಿ ಕಟ್ಟಲು ಶ್ರಮಿಸಿದರು.

ಇವರ ನಾಟಕದ ರಚನೆ, ಕಂಪನಿ ನಾಟಕದ ಚಟುವಟಿಕೆಗಳು, ವೆಂಕೋಬರಾಯರ ಬಾಲ್ಯ ಜೀವನ, ನಾಟಕ ಆಸಕ್ತಿ ಹುಟ್ಟಿದ ಬಗೆ, ನಾಟಕ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ರೀತಿ, ಮತ್ತು ವೆಂಕೋಬರಾಯರ ಸಮಕಾಲೀನರ ಬಗ್ಗೆ ಒಂದಿಷ್ಟು ವಿವರಗಳು, ಕಲಾಕ್ಷೇತ್ರದಲ್ಲಿ ವೆಂಕೋಬರಾಯರ ಸ್ಥಾನಗಳನ್ನು ಪರಿಚಯಿಸುವ ಪುಸ್ತಕ ಇದಾಗಿದೆ.

Related Books