ಹಿರಿಯ ವೃತ್ತಿ ರಂಗ ಚೇತನ ಕಂಚಿಕೇರಿ ಶಿವಣ್ಣ ಅವರನ್ನು ಪರಿಚಯಿಸುವ ಕೃತಿ ಇದು. ಕಂಚಿಕೇರಿ ಶಿವಣ್ಣ ಅವರ ಬಾಲ್ಯ-ವಿದ್ಯಾಭ್ಯಾಸ, ಬಿಟ್ಟೆನೆಂದರೂ ಬಿಡದ ಬಣ್ಣದ ಮಾಯೆ, ಕಲಬುರ್ಗಿ ಕ್ಯಾಂಪಿನ ಖುಷ್ ಖಬರ್, ಓಬಳೇಶ್ವರ ಕಂಪನಿಯಲ್ಲಿ ರಂಗ ವಿಪ್ಲವ, ವರದಾ ನದಿಯ ಆಚೆ-ಈಚೆ, ಮೆಡ್ಲೇರಿಯಲ್ಲಿ ಪವಾಡ ಸಂದೇಶ ಮಳೆ, ಎಂ.ಪಿ. ಪ್ರಕಾಶ್‌ಗೂ ಕೇರ್ ಮಾಡದ ಅಧಿಕಾರಿಗಳು, ಗಡಿನಾಡಲ್ಲಿ ಮಡುಗಟ್ಟಿದ ದುಃಖ ದುಮ್ಮಾನಗಳು, ವಜ್ರಮಹೋತ್ಸವದ ನಂತರ ನೆನಪು, ಮೂರು ತಲೆಮಾರಿನ ಶಿವಣ್ಣನ ರಂಗ ಕುಟುಂಬ ಮುಂತಾದ ಮಾಹಿತಿ ಈ ಕೃತಿಯಲ್ಲಿದೆ.
ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಹಗಾರರಾದ ಮಲ್ಲಿಕಾರ್ಜುನ ಕಡಕೋಳ ಅವರು ಜನಿಸಿದ್ದು 1956 ಅಕ್ಟೋಬರ್ 2ರಂದು. ಹುಟ್ಟೂರು ಗುಲ್ಬರ್ಗ ಜಿಲ್ಲೆಯ ಕಡಕೋಳ. ತಂದೆ ಸಾಧು, ತಾಯಿ ನಿಂಗಮ್ಮ. ಹುಟ್ಟೂರು, ಯಡ್ರಾಮಿ ಹಾಗೂ ಗುಲ್ಬರ್ಗದಲ್ಲಿ ಶಿಕ್ಷಣ ಪಡೆದ ಇವರು ಆರೋಗ್ಯ ಇಲಾಖೆಯಲ್ಲಿ ಬೋದಕರಾಗಿ, ಹಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ, ದಾವಣಗೆರೆ ಮಹಾನಗರಪಾಲಿಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೈವಾರ ನಾರಾಯಣ ತಾತ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ...
READ MORE