ಡಾ. ಬಿ ಜನಾರ್ದನ ಭಟ್ ಅವರು ಕಾದಂಬರಿಕಾರ, ಕಥೆಗಾರ, ಅಂಕಣಕಾರರಾಗಿ ಪರಿಚಿತರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಪ್ರಾದೇಶಿಕ ವಸ್ತು, ಪಾತ್ರಗಳಿಗೆ ಒತ್ತುಕೊಟ್ಟು ಕಥೆ, ಕಾದಂಬರಿಗಳನ್ನು ಬರೆಯುತ್ತಾ ಬಂದಿದ್ದಾರೆ. ಇವರ ಕುರಿತು ಅನಿತಾ ಪಿ. ತಾಕೊಡೆ ಅವರು ’ಸವ್ಯಸಾಚಿ ಸಾಹಿತಿ’ ಕೃತಿಯನ್ನು ರಚಿಸಿದ್ದಾರೆ. ಜನಾರ್ಧನ್ ಅವರ ಬದುಕು, ಬರೆಹಗಳು, ಕಾದಂಬರಿಗಳು, ಕಥಾವಸ್ತುಗಳ ಕುರಿತು ವಿವರಿಸಿದ ಈ ಕೃತಿಯು ಭಟ್ ಅವರ ಸೃಜನಾತ್ಮಕ ಪ್ರತಿಭೆಯ ಸಮಗ್ರ ದರ್ಶನ ನೀಡುತ್ತದೆ.
ಅನಿತಾ ಪಿ. ತಾಕೊಡೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ತಾಕೊಡೆಯವರು. ಪ್ರಸ್ತುತ ಮುಂಬಯಿ ನಿವಾಸಿ. ಇವರು ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಹೆಸರು ಮಾಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್‍ವರ್ಕ್‍ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ...
READ MORE