ನಾಡಿನ ಪ್ರಖ್ಯಾತ ಚಿತ್ರಕಲಾವಿದ ವಿ.ಟಿ. ಕಾಳೆ ಅವರ ಬದುಕು, ಬರಹ ಹಾಗೂ ಸಾಧನೆ ಕುರಿತು ಸಂಪೂರ್ಣ ಮಾಹಿತಿ ನೀಡುವ ಹೊತ್ತಗೆ ’ಡಾ.ವಿ.ಟಿ. ಕಾಳ”. ಕೃತಿಯನ್ನು ಡಾ. ಎಸ್.ಸಿ.ಪಾಟೀಲರು ಬರೆದಿದ್ದಾರೆ.
ಡಾ. ಎಸ್. ಸಿ. ಪಾಟೀಲ ಅವರು ಗುಲಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮಾನಶಿವನಗಿಯಲ್ಲಿ 1955ರಲ್ಲಿ ಜನಿಸಿದರು. ಪ್ರಾಥಮಿಕ - ಪ್ರೌಢಶಿಕ್ಷಣಗಳನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿದ ಅವರು ಆನಂತರ ಎಂ.ಎ. ಎಂ.ಎಡ್.ಗಳಲ್ಲದೆ ಚಿತ್ರಕಲೆ ಹಾಗೂ ಶಾಸನಶಾಸ್ತ್ರಗಳಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಜನಪದ ಚಿತ್ರಕಲೆ ಹಾಗೂ ಕಲಾಶಿಕ್ಷಣ ಕುರಿತು ಪ್ರತ್ಯೇಕವಾದ ಎರಡು ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಚಿತ್ರಕಲಾವಿದರಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದು ಆರು ಪುಸ್ತಕಗಳನ್ನು ರಚಿಸಿಕೊಟ್ಟಿರುವುದಲ್ಲದೆ, ಹತ್ತಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕಲೆ ಹಾಗು ಶಿಕ್ಷಣ ಕ್ಷೇತ್ರಗಳಲ್ಲಿ ಕೆಲವು ಪ್ರಶಸ್ತಿ ಪಡೆದಿರುವ ಶ್ರೀಯುತರು ಕೆಲವರ್ಷ ...
READ MORE