ಯಕ್ಷಗಾನ ಖ್ಯಾತಿಯ ಡಾ. ಎಂ. ಪ್ರಭಾಕರ ಜೋಶಿ ಅವರ ಯಕ್ಷಗಾನದ ಪ್ರೀತಿ, ಬದುಕು, ಬರೆಹ, ವಿದ್ವತ್ ಹೀಗೆ ವಿವಿಧ ಆಯಾಮಗಳನ್ನು ಕಟ್ಟಿಕೊಡುವ ನುಡಿ ಮಾಲೆಯೇ "ಜಾಗರದ ಜೋಷಿ". ಜಾಗರ ಎಂಬುದು ಯಕ್ಷಗಾನ ಕುರಿತ (1974) ಅವರ ಮೊದಲ ವಿಮರ್ಶಾ ಸಂಕಲನವೂ ಹೌದು.
ಯಾವ ಕೋನದಿಂದ ನೋಡಿದರೂ ಡಾ. ಎಂ. ಪ್ರಭಾಕರ ಜೋಶಿ ಅವರು ಒಗಟಾಗಿಯೇ ಉಳಿಯುತ್ತಾರೆ ಎನ್ನುವ ಮೂಲಕ ಅವರ ಬೌದ್ಧಿಕ ಆಳವನ್ನು, ಅನುಭವದ ಗಟ್ಟಿತನವನ್ನು, ವಿಮರ್ಶೆ ವಿದ್ವತ್ತಿನ ವಿಸ್ತಾರವನ್ನು ಲೇಖಕ ನಾ. ಕಾರಂತ ಪೆರಾಜೆ ಅವರ ಬರೆಹ ಗಮನ ಸೆಳೆಯುತ್ತದೆ.
ಅವರೇ ಹೇಳುವಂತೆ "ಜೋಶಿ ಅವರ ಕುರಿತು ಕಾಲಕಾಲಕ್ಕೆ ಆತ್ಮೀಯರು ಬರೆದ ಬರೆಹ, ಇ-ಬರೆಹಗಳು, ಅವರ ಕೃತಿಯ ಮುನ್ನುಡಿಗಳು ಕೃತಿಯೊಳಗೆ ಸೇರಿವೆ. ಮುನ್ನುಡಿಗಳಲ್ಲಿ ಪ್ರಸ್ತುತಿಗಳನ್ನಷ್ಟೇ ಆಯ್ದುಕೊಳ್ಳಲಾಗಿದೆ. ಸಹಜವಾಗಿ ಬರಬಹುದಾದ ಕೃತಿಗಳ ಪಟ್ಟಿ, ಪ್ರಶಸ್ತಿಗಳ ಉಲ್ಲೇಖಗಳನ್ನು ಲೇಖನಗಳಿಂದ ಲೇಖಕರ ಕ್ಷಮೆ ಕೋರಿ ಕೈ ಬಿಟ್ಟಿದ್ದೇನೆ’ ಎಂದು ಹೇಳಿದ್ದಾರೆ.
’ ಯಕ್ಷಗಾನ ಸಮ್ಮೇಳನದ ಅಧ್ಯಕ್ಷೀಯ ಭಾಷಣವೂ ಇಲ್ಲಿದ್ದು, ಅವರ ವಿಮರ್ಶೆಯ ಸಮಗ್ರ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಇಲ್ಲಿಯ ಪ್ರತಿ ಬರೆಹವೂ, ಚಿಂತನೆಯು ಆಪ್ತವೆನಿಸುತ್ತವೆ. ಯಕ್ಷಗಾನ ಪರಂಪರೆಯ ಸಂರಕ್ಷಣೆಯ ಭಾಗವಾಗಿ ಈ ಕೃತಿ ಗಮನ ಸೆಳೆಯುತ್ತದೆ.
ಪತ್ರಕರ್ತರಾಗಿರುವ ನಾ. ಕಾರಂತ ಪೆರಾಜೆ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಸುಳ್ಯದ ನಿವಾಸಿ ಅಗಿರುವ ಅವರು ಯಕ್ಷಗಾನದಲ್ಲಿ ವಿಶೇಷ ಅಸಕ್ತಿ ಉಳ್ಳವರು. ನಾ. (ನಾರಾಯಣ) ಕಾರಂತ ಪೆರಾಜೆಯವರು ಪತ್ರಕರ್ತ, ಸಾಹಿತಿ, ಯಕ್ಷಗಾನ ಕಲಾವಿದ, ಕೃಷಿಕ ಮತ್ತು ಚಿಂತಕ. ಅವರು ಕೃಷಿ ಮಾಸಿಕ ’ಅಡಿಕೆ ಪತ್ರಿಕೆ’ಯಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಕೃಷಿ, ಗ್ರಾಮೀಣ ರಂಗದ ಬಗ್ಗೆ, ಯಕ್ಷಗಾನದ ಬಗ್ಗೆ ಮಾಹಿತಿಪೂರ್ಣವಾಗಿ ಆಕರ್ಷಕವಾಗಿ ಬರೆಯುವ ಕಾರಂತರು 'ನೆಲದ ನಾಡಿ' (ಉದಯವಾಣಿ), ಹೊಸದಿಗಂತದಲ್ಲಿ 'ಮಾಂಬಳ' (ಹೊಸದಿಗಂತ) “ದಧಿಗಿಣತೋ' (ಪ್ರಜಾವಾಣಿ) ಅಂಕಣಗಳನ್ನು ಬರೆಯುತ್ತಿದ್ದಾರೆ. 'ತಳಿತಪಸ್ವಿ', 'ಮಾಂಬಳ', 'ಮನಮಿಣುಕು', 'ಮಣ್ಣಮಿಡಿತ', 'ಮಣ್ಣಮಾಸು', ...
READ MORE