ಲೇಖಕ ಶಂಕರ ಬೈಚಬಾಳ ಅವರ ’ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು’ ಕೃತಿಯು ತೋಂಟದ ಸಿದ್ಧಲಿಂಗ ಶ್ರೀಗಳ ಜೀವನ ಚಿತ್ರಣವಾಗಿದೆ. ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ 19ನೇ ಪೀಠಾಧಿಪತಿಯಾಗಿ ಪಟ್ಟಕ್ಕೇರಿದ ಶ್ರೀ ಸಿದ್ದಲಿಂಗ ಸ್ವಾಮಿಗಳು ಗದುಗಿನ ಮಠವನ್ನು ಮುನ್ನಡೆಸುವ ರೀತಿಯನ್ನು ಈ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಶ್ರೀಗಳ ಕುರಿತ ಸಾಕಷ್ಟು ಕೃತಿಗಳು ಈಗಾಗಲೇ ಬಂದಿದ್ದು ಸಾಹಿತ್ಯ, ಕಲೆ, ಸಂಗೀತ, ಸಮಾಜಸೇವೆ, ಆಧ್ಯಾತ್ಮಿಕನೆಲೆ ಒಳಗೊಂಡ ಈ ಕೃತಿಯು ಅತ್ಯಂತ ಸರಳವಾಗಿ ಎಲ್ಲ ವರ್ಗದ ಓದುಗರಿಗೂ ತಿಳಿಯುವಂತಿದೆ.
ಸಾಹಿತಿ ಶಂಕರ ಮಲ್ಲಪ್ಪ ಬೈಚಬಾಳ ಅವರು ಬಿಜಾಪುರ ಜಿಲ್ಲಾ ಬಸವನ ಬಾಗೇವಾಡಿ ತಾ, ಮಸಬಿನಾಳದಲ್ಲಿ 1966 ಜುಲೈ 22ರಂದು ಜನಿಸಿದರು. ಜಾನಪದ ಗಾಯಕ, ಚಿತ್ರಕಲಾವಿದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಜಾನಪದ, ಐತಿಹಾಸಿಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ, ಕವಿತೆ, ವಿಮರ್ಶೆ, ಚುಟುಕಗಳು ಇತರರ ಸಂಕಲನಗಳಲ್ಲಿಯೂ ಸೇರಿವೆ. ಪುಣೆಯ ಯಂಗ್ ಸ್ಟಾರ್ ಅಸೋಸಿಯೇಷನ್‌ದ ಕನ್ನಡ ಕಾರ್ಯಕ್ರಮದಲ್ಲಿ ಮೈಸೂರಿನ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬೇರೆ, ಬೇರೆ ಬಾನುಲಿ ಕೇಂದ್ರಗಳಿಂದ ಭಾಷಣಗಳು ಪ್ರಸಾರವಾಗಿವೆ. ಇವರ ಪ್ರಮುಖ ಕೃತಿಗಳೆಂದರೆ ಶತಾಯುಷಿ ಸೊನ್ನದ ಶಿವಾನಂದ ಅಪ್ಪಗಳು, ವಚನ ಮಾಂಗಲ್ಯ, ಅದೇನ ಕಾಗದಂತಿ, ಭೀಮಾರಥಿ, ರಾಜಗುರು, ಸೈತಾನ ...
READ MORE