ಸ್ನೇಹಜೀವಿ ಹೆಚ್.ಆರ್.‌ ದಾಸೇಗೌಡ

Author : ಕೆ.ವಿ. ಮುದ್ದವೀರಪ್ಪ

Pages 156

₹ 200.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಅದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲೂಕು, ಮಂಡ್ಯ-571448.

Synopsys

ಸ್ನೇಹಜೀವಿ ಹೆಚ್.ಆರ್.‌ ದಾಸೇಗೌಡ ಈ ಕೃತಿಯನ್ನು ಲೇಖಕ ಕೆ.ವಿ. ಮುದ್ದವೀರಪ್ಪನವರು ರಚಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ‘ಹುಟ್ಟಿದ್ದು ಹೊರನಾಡ ಕನ್ನಡಿಗರಾಗಿಯಾದರೂ ತಮ್ಮ ಜೀವಿತದ ಉದ್ದಕ್ಕೂ ಕನ್ನಡ ನಾಡು, ನುಡಿಗೆ ಅಪಾರ ಸೇವೆ ಸಲ್ಲಿಸಿದ ಕೀರ್ತಿವಂತ, ವಿದ್ವಾಂಸ, ದಕ್ಷ ಆಡಳಿತಗಾರ, ಸ್ನೇಹಜೀವಿ, ನೊಂದವರ ಹಿತರಕ್ಷಕ ಪ್ರೊ. ಹೆಚ್.ಆರ್. ದಾಸೇಗೌಡರು. ಅಪ್ಪಟ ದೇಶಪ್ರೇಮಿ. ಅವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು, ಮೈಸೂರು, ಬೆಂಗಳೂರು, ತುಮಕೂರು ಮುಂತಾದ ಕಡೆ ಅವರು ಶಿಕ್ಷಣ, ಸಾಹಿತ್ಯ, ಆಡಳಿತ, ರಾಜ್ಯಶಾಸ್ತ್ರ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಅವರು ಕಣ್ಮರೆಯಾಗಿ ಹಲವು ವರ್ಷಗಳು ಕಳೆದಿದ್ದರೂ ಇಂದಿಗೂ ಸ್ಮರಣೀಯವಾಗಿದೆ; ಮಾದರಿಯಾಗಿದೆ. ಗಾಂಧಿ, ಕುವೆಂಪು ಅವರ ಆದರ್ಶವ್ಯಕ್ತಿಗಳು, ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿಯಾಗಿ ಅವರು ಮಾಡಿದ ಕೆಲಸ ಸಂಸ್ಥೆಯಿಂದ ದೂರವಿದ್ದ ಅನೇಕ ಗಾಂಧಿವಾದಿಗಳನ್ನು, ವಿಚಾರವಂತರನ್ನು, ಯುವಕರನ್ನು ಸ್ಮಾರಕ ನಿಧಿ ಮತ್ತು ಗಾಂಧಿವಾದದ ಕಡೆಗೆ ಹತ್ತಿರವಾಗುವಂತೆ, ಆಕರ್ಷಿತರಾಗುವಂತೆ ಮಾಡಿತು. ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಣಾಧಿಕಾರಿಯಾಗಿ ಅವರು ಕೈಗೊಂಡ ಆಡಳಿತಾತ್ಮಕ ಕ್ರಮಗಳಿಂದ ವಿಶ್ವವಿದ್ಯಾಲಯಕ್ಕೆ ಘನತೆ ಬಂದಿತು. ಪ್ರಸಾರಾಂಗದ ನಿರ್ದೇಶಕರಾಗಿ ನೂರಾರು ಮೌಲಿಕ ಕೃತಿಗಳನ್ನು ಪ್ರಕಟಿಸಿದರು. ಸ್ವತಃ ಲೇಖಕರೂ ಅನುವಾದಕರೂ ಆಗಿದ್ದ ಅವರು ಕನ್ನಡದಲ್ಲಿ ಜ್ಞಾನವೃದ್ಧಿಯಾಗುವಂತಹ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರಿದ್ದ ಕಡೆ ಪ್ರೀತಿ, ಸ್ನೇಹದ ಒರತೆ ಉಕ್ಕುತ್ತಿತ್ತು. ನಿರ್ಮಲ ಅಂತಃಕರಣದ, ಜಾತ್ಯತೀತತೆಗೆ ಬದ್ಧರಾಗಿದ್ದ ಪ್ರೊ ಹೆಚ್.ಆರ್. ದಾಸೇಗೌಡರ ಜೀವನ ಮತ್ತು ಸಾಧನೆ ಕುರಿತು ಡಾ. ಕೆ.ವಿ. ಮುದ್ದವೀರಪ್ಪನವರು ಸ್ನೇಹಜೀವಿ ಹೆಚ್.ಆರ್. ದಾಸೇಗೌಡ ಕೃತಿಯನ್ನು ಅತ್ಯಂತ ಪ್ರೀತಿಯಿಂದ ರಚಿಸಿದ್ದಾರೆ ಎಂದು ಕೃತಿಯ ಕುರಿತಾಗಿ ವಿವರಿಸಲಾಗಿದೆ.

About the Author

ಕೆ.ವಿ. ಮುದ್ದವೀರಪ್ಪ
(26 May 1974)

ಲೇಖಕ ಕೆ.ವಿ. ಮುದ್ದವೀರಪ್ಪಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಂಗಮರಹಳ್ಳಿ ಗ್ರಾಮದವರು. ತಂದೆ ಎನ್. ವೀರಣ್ಣ, ತಾಯಿ ತಿಮ್ಮಕ್ಕ. ಇವರ ಶಿಕ್ಷಣ ಜ೦ಗಮನಹಳ್ಳಿ, ಹೊಸಹಳ್ಳಿ, ಸಿರಾ ಮತ್ತು ಬೆಂಗಳೂರಿನಲ್ಲಿ ನಡೆಯಿತು. ಕನ್ನಡ ಎಂ.ಎ, ಪದವೀಧರರು. ಜೂನಿಯರ್ ರೀಸರ್ಚ್ ಫೆಲೋಶಿಪ್ ಪಡೆದು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕನ್ನಡ ಸಾಹಿತ್ಯಾಧ್ಯಯನ ವಿಭಾಗದಲ್ಲಿ  'ತುಮಕೂರು ಜಿಲ್ಲೆಯ ಕೋಟೆಕೊತ್ತಲಗಳ ಜಾನಪದೀಯ ಅಧ್ಯಯನ' ವಿಷಯ ಕುರಿತು (2004) ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕೃತಿಗಳು; ತುಮಕೂರು ಜಿಲ್ಲೆಯ ಕೋಟೆಗಳ ಸಾಂಸ್ಕೃತಿಕ ಒಳನೋಟಗಳು, ಸಂಕರ ಸಂಸ್ಕೃತಿ, ಜಾನಪದ ಕೃತಿ ಸಮೀಕ್ಷೆ, ಬಿಸಿಲದನಿ, ಶಿಕ್ಷಣತಜ್ಞ ಡಾ. ವೂಡೇ ಪಿ. ಕೃಷ್ಣ, ...

READ MORE

Related Books