ಗುಬ್ಬಿಗಳ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಮೊಹಮ್ಮದ್ ದಿಲಾವರ್. ಗುಬ್ಬಿ ಕತೆ ಹೇಳುತ್ತಲೇ ಅದರ ವೈಜ್ಞಾನಿಕ ಮಹತ್ವವನ್ನು ತಿಳಿಸಿ ಸಂರಕ್ಷಣೆಗೆ ಮುಂದಾದ ಅವರ ಮತ್ತು ಗುಬ್ಬಿ ನಡುವಿನ ಜೀವನ ಕೃತಿ ಇದೆಂದರೆ ತಪ್ಪಾಗಲಾರದು. ಮುಖಪುಟದಲ್ಲಿ ಅಂದವಾದ ಗುಬ್ಬಿಮರಿಯ ಚಿತ್ರವಿರುವುದು ದಿಲಾವರ್ ಅವರ ಗುಬ್ಬಿ ಪ್ರೇಮದ ಕತೆಗೆ ಸಾಕ್ಷಿ. ಇದು ಗುಬ್ಬಿಯ ಕತೆಯೂ ಹೌದು. ಓರ್ವ ಯುವಕನ ಗುಬ್ಬಚ್ಚಿಗಳನ್ನು ರಕ್ಷಿಸುವ ಭಾವುಕ ಪಯಣದ ಮತ್ತು ಪ್ರಯತ್ನದ ಕತೆಗೆ ಲೇಖಕಿ ಅಕ್ಷರ ರೂಪ ಕೊಟ್ಟಿರುವ ಮಹತ್ವದ ಕೃತಿ ಇದು. . ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದರುವ ಈ ಕೃತಿ, ಪರಿಸರ ಪ್ರೇಮದ ಕತೆಯನ್ನು ಹೇಳುತ್ತದೆ.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE