ಸಾಧಕನ ಹೆಜ್ಜೆಗಳು : ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ

Author : ಟಿ. ಆರ್. ಅನಂತರಾಮು

Pages 152

₹ 135.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560 001
Phone: 08022161913

Synopsys

ಸರ್.ಎಂ.ವಿ. ಎಂದೊಡನೆ ನೂರೆಂಟು ಚಿತ್ರಗಳು ಥಟ್ಟನೆ ಕಣ್ಣಮುಂದೆ ನಿಲ್ಲುತ್ತವೆ. ಅಸಾಧಾರಣ ಎಂಜಿನಿಯರ್, ಅನನ್ಯ ರಾಷ್ಟ್ರಪ್ರೇಮಿ, ಕರ್ತವ್ಯನಿಷ್ಠ ಅಧಿಕಾರಿ, ದಕ್ಷ ಆಡಳಿತಗಾರ, ಭವ್ಯ ಭಾರತ ನಿರ್ಮಾಣದ ಕನಸುಗಾರ, `ಕೈಗಾರಿಕೆ ಇಲ್ಲವೆ ಸರ್ವನಾಶ` ಎಂದು ಎಚ್ಚರಿಸಿದ ಮಹಾ ಚಿಂತಕ. ಜ್ಞಾನದಾಸ್ಯವನ್ನು ಧಿಕ್ಕರಿಸಿದ ಧೀಮಂತ. ಆತ್ಮಾಭಿಮಾನವನ್ನು ಬಲಿಗೊಡದ, ಆದರೆ ಅಹಂಕಾರಕ್ಕೆ ಎಡೆಗೊಡದ ಛಲವಾದಿ. ಈ ಮಹಾ ಮೇಧಾವಿಯನ್ನು ಕುರಿತು ಕನ್ನಡದಲ್ಲಿ ಅನೇಕ ಕೃತಿಗಳು ಹೊರಬಂದಿವೆ, 

`ಸಾಧಕನ ಹೆಜ್ಜೆಗಳು’ ಕೃತಿಯಲ್ಲಿ ಈ ಮೇರುಪುರುಷನ ಬದುಕನ್ನು ಮತ್ತೊಂದು ಕೋನದಲ್ಲಿ ನೋಡಲಾಗಿದೆ. ಅವರ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಂದರ್ಭ ಬಂದಾಗಲೆಲ್ಲ ಈ ಚತುರಮತಿ ಅದನ್ನು ಗೆದ್ದ ಬಗೆ ಹೇಗೆಂಬುದನ್ನು ಕೃತಿಯುದ್ದಕ್ಕೂ ಸೋದಾಹರಣವಾಗಿ ತೆರೆದಿಡಲಾಗಿದೆ. ಅವರ ಹೆಜ್ಜೆಗಳನ್ನು ಅರಸಿ ಹೊರಟವರಿಗೆ ಈ ಕೃತಿಯ ಪ್ರತಿ ಅಧ್ಯಾಯದಲ್ಲೂ ಪ್ರೇರಣೆ ಒದಗಿಸುವ ಸನ್ನಿವೇಶವಿದೆ. ಇದರ ಜೊತೆಗೆ, ಸರ್.ಎಂ.ವಿ. ಅವರಿಗೆ ನೂರು ತುಂಬಿದ ಸಂದರ್ಭದಲ್ಲಿ ಹೊರತಂದ ಕೃತಿಯಿಂದ ಸರ್.ಎಂ.ವಿ. ಅವರಿಗೆ ಸಂಬಂಧಿಸಿದ ಅನೇಕ ಹೊಸ ವಿಚಾರಗಳನ್ನು ಈ ಕೃತಿಯಲ್ಲಿ ಅನುಬಂಧವಾಗಿ ಸೇರಿಸಿದೆ. ಈ ಕೃತಿ ಈಗಾಗಲೇ ಹತ್ತು ಮುದ್ರಣಗಳನ್ನು ಕಂಡಿವೆ ಎನ್ನುವುದು ಈ ಕೃತಿಯ ಗಟ್ಟಿತನಕ್ಕೆ ಸಾಕ್ಷಿ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books