ನನ್ನ ತಮ್ಮ ಶಂಕರ

Author : ಅನಂತನಾಗ್ (ಅನಂತ್ ನಾಗರಕಟ್ಟೆ)

Pages 208

₹ 220.00




Year of Publication: 2018
Published by: ಟೋಟಲ್ ಕನ್ನಡ
Address: 638, 31ನೇ ಅಡ್ಡರಸ್ತೆ, 10ನೇ ‘ಬಿ’ ಮುಖ್ಯರಸ್ತೆ, ಜಯನಗರ 4ನೇ ವಿಭಾಗ, ಬೆಂಗಳೂರು- 560011
Phone: 9243455672

Synopsys

‘ನನ್ನ ತಮ್ಮ ಶಂಕರ’ ಚಿತ್ರನಟ ಅನಂತ್ ನಾಗ್ ತಮ್ಮ ಶಂಕರ್ ನಾಗ್ ಅವರನ್ನು ಕುರಿತು ಬರೆದ ಕೃತಿ. ಅಕಾಲಿಕವಾಗಿ ಮರಣಹೊಂದಿದ ಪ್ರತಿಭಾನ್ವಿತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಅಗಲಿಕೆಯ ನೋವು ಮತ್ತು ಶಂಕರ್ ನಾಗ್ ಅವರೊಂದಿಗಿನ ಒಡನಾಟ ಎಲ್ಲವೂ ಈ ಕೃತಿಯಲ್ಲಿ ದಾಖಲಾಗಿವೆ. ಒಂದು ರೀತಿಯಲ್ಲಿ ಶಂಕರ್ ನಾಗ್ ಜೀವನಗಾಥೆಯೂ ಆಗಿದೆ.

About the Author

ಅನಂತನಾಗ್ (ಅನಂತ್ ನಾಗರಕಟ್ಟೆ)
(04 September 1948)

ಅನಂತನಾಗ್, ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ಸೆಪ್ಟೆಂಬರ್ 4, 1948ರಲ್ಲಿ ನಾಗರಕಟ್ಟೆಯಲ್ಲಿ ಜನಿಸಿದ ಅವರು, ಪ್ರಾರಂಭಿಕ ಶಿಕ್ಷಣವನ್ನು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ ಪೂರೈಸಿದರು. ತಾಯಿ-ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಉನ್ನತ ಶಿಕ್ಷಣಕ್ಕಾಗಿ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ, ಕೊಂಕಣಿ, ಮತ್ತು ಮರಾಠಿ ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ಪಳಗಿದರು. ಆನಂತರ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ಸಪ್ತಭಾಷಾ ನಟರಾಗಿ ಮಿಂಚಿದರು. ಸಹೋದರ ಶಂಕರ್ ನಾಗ್ ಅವರ ಕುರಿತಾಗಿ ‘ನನ್ನ ತಮ್ಮ ಶಂಕರ’ ಎನ್ನುವ ಪುಸ್ತಕ ಬರೆದಿದ್ದಾರೆ. ...

READ MORE

Conversation

Related Books