`ಸಾನೆ ಗುರೂಜಿ' ಅವರ ಜೀವನ ಚರಿತ್ರೆಯ ಕೃತಿ. ಲೇಖಕ ವಂ.ಮು. ಜೋಶಿ ಅವರು ರಚಿಸಿದ್ದಾರೆ. ದೇಶಕ್ಕಾಗಿಯೇ ಬದುಕು, ಅಗ್ನಿಯಂತೆ ಪರಿಶುದ್ಧವಾದ ಜೀವನ ನಡೆಸಿದ ಮಹಾತ್ಯಾಗಿ. ಮದುವೆಯಾಗಲಿಲ್ಲ, ತನಗಾಗಿ ತನ್ನವರಿಗಾಗಿ ಎಂದು ಏನನ್ನೂ ಬೇಡಲಿಲ್ಲ. ಶಕ್ತ ಸರ್ಕಾರಕ್ಕೆ ಹೆದರಲಿಲ್ಲ, ಜನರ ವಿರೋಧಕ್ಕೆ ಬಗ್ಗಲಿಲ್ಲ, ಸಾವಿಗೆ ಅಂಜಲಿಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ, ಬಡ ಬಗ್ಗರಿಗಾಗಿ, ಹಿಂದುಳಿದವರಿಗಾಗಿ ಬಾಳನ್ನು ತೇಯ್ದು, ಕಡೆಗೆ ತಾನೇ ಮರಣವನ್ನು ಸ್ವಾಗತಿಸಿದ ಹಿರಿಯ ಚೇತನ ಸಾನೆ ಗುರೂಜಿ ಎಂದು ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ. ಸಾನೆ ಗುರೂಜಿ ಅವರ ಬಾಲ್ಯ ಜೀವನ, ಸ್ವತಂತ್ರ್ಯ ಹೋರಾಟದ ದಿನಗಳು, ಹಿಂದುಳಿದ ವರ್ಗದವರೊಂದಿಗಿನ ಸಂಬಂಧ, ಸರ್ಕಾರದ ವಿರುದ್ಧದ ಹೋರಾಟಗಳು ಇವೆಲ್ಲವನ್ನು ಈ ಕೃತಿಯಲ್ಲಿ ಲೇಖಕರು ಸರಳ ಕನ್ನಡದಲ್ಲಿ ಚಿತ್ರಿಸಿದ್ದಾರೆ.
ಲೇಖಕ ಜೋಶಿ ವೆಂ.ಮು. ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರು. ಕರ್ನಾಟಕ ರಾಜ್ಯದ ಸಣ್ಣ ಉಳಿತಾಯ ಇಲಾಖೆಯ ಪ್ರಚಾರಕರಾಗಿದ್ದರು. ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ರಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕೃತಿಗಳು; ಚಿನ್ನದ ಪದಕ, ಹೊಸಬೆಳಕು, ಸೈನಿಕ ಉವಾಚ, ಸಮರ ಸೌದಾಮಿನಿ, ಸೆಳೆತದ ಶಿಲುಬೆ. ...
READ MORE