`ಜನಸಾಮಾನ್ಯರ ವೈದ್ಯ ಡಾ.ಸಿ. ಬಂದೀಗೌಡ’ ಕೃತಿಯು ಎಸ್. ಶಿವರಾಮು ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಕೃತಿಗೆ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಡಾ.ಸಿ. ಬಂದೀಗೌಡರು‘ಜನಸಾಮಾನ್ಯರ ವೈದ್ಯ’ ರೆಂದೇ ಖ್ಯಾತಿ ಪಡೆದವರು. ವೃತ್ತಿಯಿಂದ ವೈದ್ಯರಾಗಿದ್ದ ಸಿ. ಬಂದೀಗೌಡರದು ಬಹುಮುಖ ಪ್ರತಿಭೆ. ಸ್ವಾತಂತ್ಯ್ರ ಹೋರಾಟಗಾರರಾಗಿದ್ದ ಅವರು ಕೊನೆಯವರೆಗೆ ‘ಗಾಂಧೀವಾದ, ಸರಳಜೀವನ, ಲೋಕಚಿಂತೆನೆಗೆ ಹೆಸರಾಗಿದ್ದರು. ಶ್ರೀರಂಗಪಟ್ಟಣದಲ್ಲಿ ಪ್ರತಿವರ್ಷ ನಡೆಯುವ ಸರ್ವೋದಯ ಮೇಳದ ಸಂಘಟಕರಲ್ಲೊಬ್ಬರಾಗಿ ಕಾರ್ಯನಿರ್ವಹಿಸಿದವರು. ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದರೂ ಸತ್ಯಂತ ಪ್ರಾಮಾಣಿಕವಾಗಿ ಜನಪರವಾಗಿ ಯೋಜನೆಗಳನ್ನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತ, ಲೋಕಕಲ್ಯಾಣಕ್ಕಾಗಿ ಶ್ರಮಿಸಿದರು. ಪ್ರಾಮಾಣಿಕತೆಗೆ ಅನ್ವರ್ಥರಾಗಿದ್ದ ಡಾ.ಸಿ. ಬಂದೀಗೌಡರು ಆಧುನಿಕ ಮಂಡ್ಯ ಜಿಲ್ಲೆಯ ನಿರ್ಮಾತೃಗಳಲ್ಲೊಬ್ಬರು. ‘ಜನಸಾಮಾನ್ಯರ ವೈದ್ಯ ಡಾ.ಸಿ. ಬಂದೀಗೌಡ’ ಕೃತಿಯು ಅವರ ಜೀವನ ಸಾಧನೆಯ ಒಂದು ಮಹತ್ವದ ದಾಖಲೀಕರಣವಾಗಿದೆ.
ಲೇಖಕ ಎಸ್. ಶಿವರಾಮು ಅವರು ಮೂಲತಃ ಮಂಡ್ಯ ಜಿಲ್ಲೆಯ ಆಲಕೆರೆ ಗ್ರಾಮದವರು. ಆಲಕೆರೆ, ಕೀಲಾರ. ಮಂಡ್ಯ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿರುತ್ತಾರೆ. ಇತಿಹಾಸದಲ್ಲಿ ಎಂ.ಎ ಪದವೀಧರರು. ನವದೆಹಲಿಯ ಇತಿಹಾಸ ಅನುಸಂಧಾನ ಪರಿಷತ್ತಿನ ಶಿಷ್ಯವೇತನ ಪಡೆದು ‘ಕೆ.ವಿ.ಶಂಕರಗೌಡರ ಜೀವನ, ಸಾಧನೆ’ ಕುರಿತ ಪ್ರೌಢಪ್ರಬಂಧ ಸಲ್ಲಿ (2004) ಪಿ.ಹೆಚ್.ಡಿ ಪಡೆದಿದ್ದಾರೆ. ಕೆ.ಪಿ.ಎಸ್.ಸಿ ಯಿಂದ (2009) ಇತಿಹಾಸ ಅಧ್ಯಾಪಕರಾಗಿ ನೇಮಕವಾದರು. ಪ್ರಸ್ತುತ, ಸರ್ಕಾರಿ ಕಾಲೇಜು, ಮಂಡ್ಯದಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕೃತಿಗಳು : ಜನಸಾಮಾನ್ಯರ ವೈದ್ಯ ಡಾ.ಸಿ. ಬಂದೀಗೌಡ, ‘ಸಾಧಕಚೇತನ ಎ.ಜಿ. ಬಂದೀಗೌಡ’ ...
READ MORE