’ಸಾಯಿಪಾದಾನಂದ ಶ್ರೀ ರಾಧಾಕೃಷ್ಣ ಸ್ವಾಮೀಜಿ -ಒಂದು ದರ್ಶ’ನ’ ಕೃತಿಯು ಶ್ರೀಗಳ ಅಗಾಧ ವ್ಯಕ್ತಿತ್ವದ ದರ್ಶನ ನೀಡುತ್ತದೆ. ಇವರು ಮಹಾತ್ಮರ ಸಾಲಿನಲ್ಲಿ ಸೇರತಕ್ಕವರು. ವಿವಾಹವಾಗಿದ್ದರೂ ಸಂಸಾರ ಬಂಧನವಿರಲಿಲ್ಲ. ಶಿರಡಿ ಸಾಯಿಬಾಬಾ ಅವರನ್ನು ಗುರುವಾಗಿಸಿ, ಅವರ ಅನುಗ್ರಹಕ್ಕೆ ಹಂಬಲಿಸಿದವರು. ಧಾರ್ಮಿಕ ಮನೋಭಾವ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಭಕ್ತಿ-ಶ್ರದ್ಧೆ, ಪಾರಾಯಣ ಮುಂತಾದ ಧಾರ್ಮಿಕ ನಡೆಯ ಮಹತ್ವವನ್ನು ಪ್ರತಿಪಾದಿಸುತ್ತಲೇ ಬಂದವರು. ರಂ. ನಾರಾಯಣ ಅಯ್ಯಂಗಾರ್ ಅವರು ಈ ಕೃತಿಯ ಕರ್ತೃ.
ರಂ. ನಾರಾಯಣ ಅಯ್ಯಂಗಾರ್ (ಜ. 1943) ಮೈಸೂರಿನ ಹೆಸರಾಂತ ಸಂಸ್ಕೃತ ಪಂಡಿತ ಕೀರ್ತಿಶೇಷ ವಿದ್ಯಾರತ್ನ ಪ್ರೊ.ಎಸ್. ರಂಗಾಚಾರ್ ಅವರ ಪುತ್ರರು. ತಾಯಿ ಪದ್ಮಾಸಿನಿ. ಬಾಲ್ಯದಿಂದಲೇ ಭಾರತ ದೇಶದ ಪುರಾತನ ಇತಿಹಾಸ, ಸಾಹಿತ್ಯ, ಕಲೆ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯಲ್ಲಿ ಆಸಕ್ತಿ, ಸಂಸ್ಕೃತದ ವಾತಾವರಣದಲ್ಲಿ ಬೆಳೆದರೂ ಜೊತೆಗೆ ಆಧುನಿಕ ವಿದ್ಯಾಭ್ಯಾಸ, ಇಂಜಿನಿಯರಿಂಗ್ ಪದವೀಧರ. ಬೆಂಗಳೂರಿನ ಪ್ರಸಿದ್ದ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಡಾಕ್ಟರೇಟ್, ನಂತರ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಉಚ್ಚ ಸಂಶೋಧನೆ. ಸ್ವದೇಶಕ್ಕೆ ಹಿಂದಿರುಗಿ ಟಾಟಾ ಇನ್ಸ್ಟಿಟ್ಯೂಟಿನ (IISc) ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 1969ರಿಂದ 2005ರಲ್ಲಿ ಕೆ.ಎಸ್.ಐ.ಡಿ.ಸಿ ವಿಶೇಷ ಪ್ರೊಫೆಸರ್ ಪದವಿಯಿಂದ ನಿವೃತ್ತಿ ...
READ MORE