ದಾಮೋದರಂ ಸಂಜೀವಯ್ಯನವರ ರಾಜಕೀಯ ಜೀವನ ಮತ್ತು ಸಾಧನೆ

Author : ಸುರೇಶ್ ಎನ್. ಹುಲ್ಲನ್ನವರ

Pages 284

₹ 300.00




Year of Publication: 2015
Published by: ಸುಲೋಚನಾ ಪ್ರಕಾಶನ
Address: ಧಾರವಾಡ-3
Phone: 9886912497

Synopsys

ಡಾ. ಸುರೇಶ ಎನ್. ಹುಲ್ಲನ್ನವರ ಅವರ ಕೃತಿ-ದಾಮೊದರಂ ಸಂಜೀವಯ್ಯನವರ ರಾಜಕೀಯ ಜೀವನ ಮತ್ತು ಸಾಧನೆ. ದಾಮೊದರಂ ಸಂಜೀವಯ್ಯನವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಗೆ ಎರಡು ಬಾರಿ ಅಧ್ಯಕ್ಷರಾಗಿದ್ದರು. ಮೂರು ಬಾರಿ ಕೇಂದ್ರ ಸಚಿವರಾಗಿದ್ದರು. ಸ್ವತಂತ್ರ ಭಾರತದ ಮೊಟ್ಟಮೊದಲ ದಲಿತ ಮುಖ್ಯಮಂತ್ರಿ ಎಂಬ ಖ್ಯಾತಿಯೂ ಇವರಿಗೆ ಇದೆ. ಮಾತ್ರವಲ್ಲ; ಅಖಿಲಭಾರತ ಕಾಂಗ್ರೆಸ್ ಪಕ್ಷದ ಮೊದಲ ದಲಿತ ಅಧ್ಯಕ್ಷರೂ ಆಗಿದ್ದರು. ಮೌಲ್ಯಾಧಾರಿತ ರಾಜಕಾರಣ ನಡೆಸಿರುವ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ದಾಮೊದರಂ ಸಂಜೀವಯ್ಯನವರು ಒಬ್ಬರು. ಜಾತಿಯೇ ಪ್ರಧಾನವಾಗುವ ಭಾರತದಲ್ಲಿ ದಲಿತ ದಾಮೊದರಂ ಸಂಜೀವಯ್ಯನವರ ಹೋರಾಟಗಳು, ಸಮಸ್ಯೆಗಳು ಹಾಗೂ ಸವಾಲುಗಳ ಅಧ್ಯಯನ ನಡೆದಿಲ್ಲ. ಅವರ ಬದುಕು-ಸಾಧನೆ ಕುರಿತು ಗ್ರಂಥಗಳು ಕಡಿಮೆ. ಸಂಶೋಧನೆಯಿಂದಲೂ ಇವರ ಸಮಗ್ರ ಬದುಕಿನ ಚಿತ್ರಣ ಇಲ್ಲವಾಗಿದೆ. ಈ ಕೃತಿಯು ಆ ಕೊರತೆಯನ್ನು ನೀಗಿಸಿದೆ.

ಶೋಷಿತ ವರ್ಗಗಳ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನ : ಒಂದು ಸಮೀಕ್ಷೆ, ದಾಮೊದರಂ ಸಂಜೀವಯ್ಯನವರ ಜೀವನ, ಆಂಧ್ರ ರಾಜ್ಯಾಡಳಿತದಲ್ಲಿ ದಾಮೊದರಂ ಸಂಜೀವಯ್ಯ, ಭಾರತದ ರಾಜಕೀಯ ಮತ್ತು ರಾಜ್ಯಾಡಳಿತದಲ್ಲಿ ದಾಮೊದರಂ ಸಂಜೀವಯ್ಯ, ದಾಮೊದರಂ ಸಂಜೀವಯ್ಯನವರ ಆರ್ಥಿ ವಿಚಾರಗಳು ಮತ್ತು ಕಾರ್ಯಗಳು ಹೀಗೆ ವಿವಿಧ ಅಧ್ಯಾಯಗಳಡಿ ದಾಮೊದರಂ ಸಂಜೀವಯ್ಯನವರ ಬದುಕು-ಸಾಧನೆಗಳನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕೃತಿ ಇದು.

About the Author

ಸುರೇಶ್ ಎನ್. ಹುಲ್ಲನ್ನವರ

ಡಾ. ಸುರೇಶ್ ಎನ್. ಹುಲ್ಲನ್ನವರ ಅವರು ಎಂ.ಎ, ಪಿಎಚ್.ಡಿ. ಎಲ್ ಎಲ್ ಬಿ ಪದವೀಧರರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧಿ ಅಧ್ಯಯನ ದಲ್ಲಿ ಡಿಪ್ಲೊಮಾ ಪದವೀಧರರು. ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ, ಚರ್ಚಾಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ.  ಸದ್ಯ, ಧಾರವಾಡದ ಕರ್ನಾಟಕ ಕಲಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು. ...

READ MORE

Related Books