ಇಂಗ್ಲಿಷ್ ಲೇಖಕ ಡಾ. ಕೊಂಡಾವೀಡ್ ಮುರುಳಿ ಅವರು ಮೂಲದಲ್ಲಿ ರಚಿಸಿದ ಕೃತಿಯನ್ನು ಲೇಖಕ ಮಹಾಂತೇಶ ಬಿದರಿಮಠ ಅವರು ‘ಸ್ಟೀವ್ ಜೊಬ್ಸ್’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತೀವ್ರ ಚುರುಕು ಬುದ್ಧಿಯುಳ್ಳವರಾಗಿದ್ದ ಇವರು ಸ್ಟೀವ್ ವೊಝನಿಕ್ ಜೊತೆ ಸೇರಿ ಅನೇಕ ಪ್ರಯೋಗಗಳಲ್ಲಿ ತೊಡಗಿದ. ತಮ್ಮದೇ ಕಂಪನಿ ಆರಂಭಿಸಿ, ‘ಆಪೆಲ್’ ಎಂಬ ಕಂಪ್ಯೂಟರ್ ಕಂಪನಿಯ ಸಿಇಓ, ಚೇರಮನ್ ಸಹ ಆದರು. ಪರ್ಸನಲ್ ಕಂಪ್ಯೂಟರ್ (ಪಿಸಿ) ವಲಯದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದ ಕೀರ್ತಿ ಈತನಿಗೆ ಸೇರುತ್ತದೆ. ಈ ಸ್ಟೀವ್ ಜೊಬ್ಸ್ ನ ಸಾಧನೆ-ಉತ್ಸಾಹ ಮಾದರಿ. ಈತನ ಬದುಕು-ಸಾಧನೆಯನ್ನು ಚಿತ್ರಿಸುವ ಕೃತಿ ಇದು. ಮೂಲ ಫೋಟೋಗಳೊಂದಿಗೆ ಸ್ಫೂರ್ತಿದಾಯಕ ಉಲ್ಲೇಖಗಳು ಈ ಕೃತಿಯ ವಿಶೇಷತೆಗಳಾಗಿವೆ.
ಮಹಾಂತೇಶ ಬಿದರಿಮಠ ಲೇಖಕರು. ಗಣ್ಯ ವ್ಯಕ್ತಿ-ಸಾಧಕರ ಜೀವನ ಚಿತ್ರಣ ನೀಡುವಲ್ಲಿ ಆಸಕ್ತರು. ಉತ್ತಮ ಅನುವಾದಕರು. ಕೃತಿಗಳು: ಇಂದಿರಾ ಗಾಂಧಿ : ವೈಯಕ್ತಿಕ ಮತ್ತು ರಾಜಕೀಯ ಜೀವನಚರಿತ್ರೆ (ಅನುವಾದ), ಮೇರಿ ಕೋಮ್, ಸ್ಟೀವ್ ಜಾಬ್ಸ್ ...
READ MORE