ಸಮತೆಯ ಸಾಕಾರ ಮೂರ್ತಿ ರಮಣ ಮಹರ್ಷಿ

Author : ಡಿ.ಎಸ್.ನಾಗಭೂಷಣ

Pages 40

₹ 30.00




Year of Publication: 2013
Published by: ಗಾಂಧಿಗಿರಿ ಪ್ರಕಾಶನ
Address: ವಿನೋಬ ನಗರ, ಶಿವಮೊಗ್ಗ 577204
Phone: 08282248574

Synopsys

'ಸಮತೆಯ ಸಾಕಾರ ಮೂರ್ತಿ ರಮಣ ಮಹರ್ಷಿ' ಡಿ.ಎಸ್‌. ನಾಗಭೂಷಣ ಅವರ ಕೃತಿಯಾಗಿದೆ. ನಾನು ಯಾರು ನಿಜವಾಗಿ ನಾನು ಏನು? ನಾನು ಎಲ್ಲಿಂದ ಬಂದೆ? ಏಕಾಗಿ ಬಂದಿರುವ" ಎಲ್ಲಿಗೆ ಹೋಗುವ? ಈ ಬದುಕಿಗೆ ಅರ್ಥ, ಉದ್ದೇಶ, ಸಾರ್ಥಕತೆಗಳೆಂಬುವೇನಾದರೂ ಇದೆಯೇ? ಅಥವಾ ಇದೆಲ್ಲ ಕೇವಲ ಆಕಸ್ಮಿಕವೇ? ಆಕಸ್ಮಿಕವಾದರೂ ಏಕೆ? ಇದೆಲ್ಲ ಏಕೆ ನಡೆಯುತ್ತಿದೆ ? ಯಾರಾದರೂ ನಡೆಸುವವರಿದ್ದಾರಾ? ಇತ್ಯಾದಿ ಪಶ್ನೆಗಳು ಹಲವು ಬಾರಿ ಹಲವರಂತೆ ನನ್ನನ್ನೂ ಕಾಡಿವೆ, ಈ ಬಗ್ಗೆ ನನ್ನ ಯೋಗ್ಯತಾನುಸಾರ ದೊರೆತ ಹಲವು ಹಿರಿಯರ ಮತ್ತು ವಿದ್ವಾಂಸರ ಬಳಿ ಚರ್ಚಿಸಿ, ಹಲವು ಪುಸ್ತಕಗಳನ್ನು ಓದಿ, ಕೆಲವು ಬಾರಿ ಇವುಗಳಲ್ಲಿ ಕೆಲವು ಪಶ್ನೆಗಳಿಗೆ ಉತ್ತರಗಳ ಹೊಳಹುಗಳನ್ನೂ ಪಡೆದಿರುವೆ. ಆದರೆ ಈ ಎಲ್ಲವುಗಳಿಗೆ ಒಟ್ಟಾರೆಯಾಗಿ ನನಗೆ ಒಪ್ಪಿತವೆನಿಸುವ ಪರಿಭಾಷೆಯಲ್ಲಿ ಪರಿಪೂರ್ಣತೆಗೆ ಹತ್ತಿರವೆನಿಸುವ ಉತ್ತರಗಳು ದೊರೆತದ್ದು ನಾನು ರಮಣರನ್ನು ಓದಿದಾಗ, ನಿಜ, ಓದು ಅನುಭವವಲ್ಲ, ಆದರೆ ನಮ್ಮ ಅನುಭವಗಳಿಗೆ ಈ ಓದು ಹೊಸ ಬೆಳಕೊಂದನ್ನು ಒದಗಿಸಿ ಹೊಸ ಒಳನೋಟಗಳನ್ನು ಸಾಧ್ಯವಾಗಿಸುತ್ತದೆ. ರಮಣಾಶ್ರಮದ ನನ್ನ ಹಲವು ಭೇಟಿಗಳೂ ಇದಕ್ಕೆ ಪೂರಕ ಶಕ್ತಿಯನ್ನು ಒದಗಿಸಿವೆ. ಹೀಗಾಗಿ ಶ್ರೀ ರಮಣ ಮಹರ್ಷಿಗಳೊಡನೆಯ ನನ್ನ ಈ ಮುಖಾಮುಖಿಯನ್ನು ಸಹಪಥಿಕರೊಂದಿಗೆ ಹಂಚಿಕೊಳ್ಳಬೇಕೆಂಬ ಈ ತುಡಿತ ನನ್ನಲ್ಲಿ ಉಂಟಾಗಿದೆ. ಇದಕ್ಕೆ ಇಂಬು ನೀಡಿದವರು, ಸಿದ್ಧಗಂಗೆ ಶ್ರೀಗಳ ಅಭಿನಂದನ ಗ್ರಂಥವೊಂದರ ಸಂಪಾದಕರಾಗಿ ರಾಷ್ಟ್ರಕವಿ ಡಾ| ಜಿ.ಎಸ್‌. ಶಿವರುದ್ರಪ್ಪನವರು ನನ್ನಿಂದ ಬರೆಸಿದ ಒಂದು ಲೇಖನವೇ ನೆಪವಾಗಿ, ಅದು ಅರಳಿ ಈ ಕಿರುಪುಸ್ತಕದ ರೂಪು ತಳೆದಿದೆ. ಎಂದು ಲೇಖಕರು ಪುಸ್ತಕದಲ್ಲಿ ತಿಳಿಸಿದ್ದಾರೆ.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Related Books