`ಕನಕದಾಸರು' ಜೀವನಚರಿತ್ರೆಯ ಈ ಪುಸ್ತಕವನ್ನುಹಿರಿಯ ಲೇಖಕ ಅನಂತ ಕಲ್ಲೋಳ ಅವರು ರಚಿಸಿದ್ದಾರೆ. ವೀರಯೋಧರಾಗಿ, ಅನಂತರ ಕಾಗಿನೆಲೆಯ ಆದಿಕೇಶವನ ನಿಷ್ಠ ದಾಸರಾದ ಮಹಾತ್ಮರು. ‘ಕನಕನ ಕಿಂಡಿ’ ಭಕ್ತರಿಗೆ ಶ್ರೀ ಕೃಷ್ಣನನ್ನು ತೋರುವ ಕಿಂಡಿ ಮಾತ್ರವಲ್ಲ, ಕುಲ ಮುಖ್ಯವಲ್ಲ, ಆಚಾರ ಮುಖ್ಯ, ಪರಿಶುದ್ಧತೆ ಮುಖ್ಯ ಎಂಬ ಅರಿವನ್ನೂ ತೋರುವ ಕಿಂಡಿಯಾಗಿದೆ. ‘ನೀನು ಕರೆದಾಗ ಬರುವೆ’ ಎಂದು ಭಗವಂತನಿಂದ ವಾಗ್ದಾನ ಪಡೆದ ಭಕ್ತ, ಬಾಳಿನ ದಾರಿದೀಪಗಳಾಗುವ ತತ್ವಗಳನ್ನು ಸುಲಭವಾದ ಮಾತುಗಳಲ್ಲಿ, ತಮ್ಮ ಹಾಡುಗಳಲ್ಲಿ ನಿರೂಪಿಸಿ ಅಮೂಲ್ಯ ಆಸ್ತಿಯನ್ನು ಕನ್ನಡಿಗರಿಗೆ ಕೊಟ್ಟ ಮಹಾನುಭಾವರು ಎಂದು ಕನಕದಾಸರ ಕುರಿತಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಇಂದಿಗೂ, ಕನಕದಾಸರ ಕೀರ್ತನೆಗಳು ಭಕ್ತಿಯ ಉನ್ನತ ಸ್ಥಾನದಲ್ಲಿ ನಿಲ್ಲುತ್ತದೆ.
ಕನ್ನಡ ಲೇಖಕ ಅನಂತ ಕಲ್ಲೋಳ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 1937ರ ಮಾರ್ಚ್ 24 ರಂದು ಜನಿಸಿದ್ದು, ಇವರ ತಾಯಿ ರಮಾಬಾಯಿ, ತಂದೆ: ಅಣ್ಣಾಜಿ. ಕರ್ನಾಟಕ ವಿ.ವಿ.ಯಿಂದ ಬಿ.ಎ. ಹಾಗೂ ಎಲ್ ಎಲ್ ಬಿ ಪದವೀಧರರು. ಕೇಂದ್ರ ಅಬಕಾರಿ ಹಾಗೂ ಸುಂಕ ಇಲಾಖೆಯ ನಿವೃತ್ತ ಸಹಾಯಕ ಕಮೀಷನರ್ . ಸದ್ಯ ಬೆಳಗಾವಿಯಲ್ಲಿ ವಾಸ. ಹಾಸ್ಯ ಸಂಕಲನಗಳು: ಬ್ರಹ್ಮ ಹಾಕಿದ ಗಂಟು, ರಾಜಾ ಪಾಯಿಂಟ್ , ವೈಭೋಗದ ವೈಖರಿ, ತಾಮ್ರದ ಕಡಗ, ಹಗರಣ ಕಂಡಲ್ಲಿ ಗುಂಡು ತಂಡು ಮುಂಡು ರೇಡಿಯೋದಿಂದ ವಿಡಿಯೋದವರೆಗೆ, ಮೂಗಿನ ತುದಿ, ಜೇನಿನ ಬಾಬು. ಚರಿತ್ರೆ ಸಂಬಂಧಿತ ಕೃತಿಗಳು: ಕನಕದಾಸರು, ರಾಮದಾಸರು, ...
READ MORE