ಲೇಖಕ ಲಕ್ಷ್ಮೀಕಾಂತ ಹೆಗಡೆ ಅವರು ರಚಿಸಿದ ಕೃತಿ-ಶ್ರೀ ಅರೋಬಿಂದೊ ಶತಮಾನದ ದಾಖಲೆ (1872-1972). ಒಂದು ಶತಮಾನದ ಅವಧಿಯಲ್ಲಿ ಮಹರ್ಷಿ ಶ್ರೀ ಅರವಿಂದರ ಬದುಕನ್ನು, ಧಾರ್ಮಿಕ, ಅಧ್ಯಾತ್ಮಿಕ ಸಾಧನೆಗಳನ್ನು ಕಟ್ಟಿಕೊಡುವ ಕೃತಿ ಇದು. ಮಾತ್ರವಲ್ಲ; ಶ್ರೀ ಅರವಿಂದರ ಇಡೀ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಈ ಕೃತಿ ತೋರುತ್ತದೆ. ಶ್ರೀ ಅರವಿಂದರು, ಭಾರತವನ್ನು ಅತಿಕ್ರಮಿಸಿದ್ದರ ವಿರುದ್ಧ ಪ್ರತಿಭಟಿಸಿದವರು. ಬ್ರಿಟಿಷ್ ಆಡಳಿತ ನಡೆಸುತ್ತಿದ್ದ ಉನ್ನತ ಅಧಿಕಾರಿಗಳ ಪರೀಕ್ಷೆಗಳಲ್ಲಿ ಪಾಸಾದರೂ, ಭಾರತದಲ್ಲಿ ಬ್ರಿಟಿಷರು ನಡೆಸುತ್ತಿರುವ ದಬ್ಬಾಳಿಕೆಯನ್ನು ವಿರೋಧಿಸಿದವರು. ಪದವಿಯನ್ನೇ ನಿರಾಕರಿಸಿದರು. ಅಧ್ಯಾತ್ಮಿಕ ಸಾಧನೆಯ ಮೂಲಕ ಮನುಷ್ಯ ಜನ್ಮದ ಸಾರ್ಥಕತೆಯನ್ನು ಬೋಧಿಸಿದರು. ಇಂತಹ ಮಹಾನ್ ಚೇತನದ ವಿವಿಧ ಆಯಾಮಗಳನ್ನು ಪರಿಚಯಿಸುವ ಕೃತಿ ಇದು.
ಲಕ್ಷ್ಮೀಕಾಂತ ಎಸ್. ಹೆಗಡೆ ಅವರು ಉತ್ತಮ ಅನುವಾದಕರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು. ಭಾರತದಲ್ಲಿ ವಿಜ್ಞಾನ, ಆಧುನಿಕ ವಿಜ್ಞಾನ : ಐತಿಹಾಸಿಕ ಮತ್ತು ಸಾಮಾಜಿಕ ಸಮೀಕ್ಷೆ ಭಾರತ ಭಂಜನ (ದ್ರಾವಿಡ ಹಾಗೂ ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯ ಕೈವಾಡ (ಅನುವಾದಿತ ಕೃತಿಗಳು), ...
READ MORE