ಬಸವಣ್ಣ ಜೀವನ-ಸಾಧನೆ

Author : ಎಂ.ಜಿ. ಚಂದ್ರಶೇಖರಯ್ಯ

Pages 103

₹ 60.00




Year of Publication: 2017
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

'ಬಸವಣ್ಣ' ಎಂಬ ಕಿರು ಹೊತ್ತಿಗೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಲೇಖಕ ಎಂ.ಜಿ. ಚಂದ್ರಶೇಖರಯ್ಯ ಅವರು ಬರೆದಿದ್ದಾರೆ. 1994ರಲ್ಲಿ ಪ್ರಕಟಿತ ಕೃತಿ. ಅದರ ಪರಿಷ್ಕೃತ ಆವೃತ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 2009ರಲ್ಲಿ ಹಾಗೂ 2017ರಲ್ಲಿ ಮರುಮುದ್ರಣಗೊಂಡಿದೆ.

ಬಸವಣ್ಣ ಕೇವಲ ಭಕ್ತ, ಚಿಂತಕನಲ್ಲ. ಸಮಾಜಸುಧಾರಕ ಕೂಡ. ಆ ಕಾರಣಕ್ಕೆ ನನಗೆ ಅವನಲ್ಲಿ ಹೆಚ್ಚಿನ ಆಸಕ್ತಿ, ಗೌರವ ಇದೆ ಎನ್ನುತ್ತಾರೆ ಚಂದ್ರಶೇಖರಯ್ಯ. ಬಸವಣ್ಣನನ್ನು ಕುರಿತು ಹಲವು ಕೃತಿಗಳು, ಸಂಶೋಧನಾ ಗ್ರಂಥಗಳು ಈಗಾಗಲೇ ಬಂದಿವೆ. ದೊಡ್ಡ ವ್ಯಕ್ತಿಗಳನ್ನು, ನಮಗೆ ಪ್ರಸ್ತುತರಾದವರನ್ನು ಕುರಿತು ಎಷ್ಟು ಬಾರಿ ಬರೆದರೂ ಅವರ ವಿಚಾರಗಳು ಹೊಸದಾಗಿ ಕಾಣಿಸುತ್ತವೆ. ಬಸವಣ್ಣನಂತಹ ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ಬರೆಯುವಾಗ ಹೆಚ್ಚಿನ ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿರುವುದು ಬಹುದೊಡ್ಡ ತೊಡಕೆನಿಸುತ್ತದೆ. ಆ ಕೊರತೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿಯ ಪ್ರಯತ್ನ- ಈ ಪುಸ್ತಕ. 

About the Author

ಎಂ.ಜಿ. ಚಂದ್ರಶೇಖರಯ್ಯ

ಅಧ್ಯಾಪಕ, ಲೇಖಕ ಎಂ.ಜಿ. ಚಂದ್ರಶೇಖರಯ್ಯ ಅವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ. ತಂದೆ ಆರ್. ಗುಡುದಯ್ಯ(ಶಿಕ್ಷಕರು), ತಾಯಿ ಎಂ.ರಂಗಮ್ಮ. ಮಲ್ಲಪ್ಪನಹಳ್ಳಿ, ಚಿತ್ರದುರ್ಗ, ಸಿದ್ಧಗಂಗೆ, ಸಿರಿಗೆರೆ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ 1981ರಿಂದ 2016ರ ವರೆಗೆ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 2016 ರಿಂದ ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದ‌ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುದ್ದು, ‘ಬಸವಣ್ಣ - ಜೀವನ ಸಾಧನೆ’ ಮತ್ತು ‘ಬಚ್ಚಳ್ಳಿಯ ಬೆಳಕು’ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ‘ನಮ್ಮ ಕುವೆಂಪು’, ‘ಪ್ರಾಚೀನ ಕಾವ್ಯ ಸಂಗಮ’, ‘ಜೀವ ...

READ MORE

Related Books