ಲೇಖಕ ಸುಭಾಶ್ಚಂದ್ರ ವಿ. ನಾವಿ ಅವರ ಕೃತಿ-’ ದುಂಡಪ್ಪ ಲಾಳಸಂಗಿ’. ಶಿಕ್ಷಣ ಪ್ರೇಮಿ ದುಂಡಪ್ಪ ಲಾಳಸಂಗಿಯವರು ಕಡಣಿ ಗ್ರಾಮದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರು. ಗ್ರಾಮದೇವರ ಜಾತ್ರೆ, ಉತ್ಸವಗಳ ಮೂಲ ಕಾರಣಿಕರ್ತರು, ತಮ್ಮೂರಿನ ಮಕ್ಕಳು ಶಿಕ್ಷಣ ಪಡೆಯಲು ದೂರದ ಊರಿಗೆ ಹೋಗಬೇಕಿತ್ತು, ಅದರಲ್ಲೂ ಹೆಣ್ಣುಮಕ್ಕಳು ಪ್ರಾಥಮಿಕ ಹಂತದಿಂದಲೇ ಶಿಕ್ಷಣ ನಿಲ್ಲಿಸಿ ಬಿಡುತ್ತಿದ್ದರು, ಇದನ್ನು ಕಂಡ ದುಂಡಪ್ಪ ಪ್ರೌಢ ಮತ್ತು ಕಾಲೇಜುಗಳನ್ನು ಆರಂಭಿಸಿದರು. ಈ ಮೂಲಕ, ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ದೀಪವಾದರು. ಕಡಣಿ ಗ್ರಾಮದ ಸರಪಂಚರಾಗಿಯೂ ಗ್ರಾಮದ ಅಭಿವೃದ್ಧಿಯಲ್ಲಿ ನೆರವಾಗಿದ್ದಾರೆ. ಬಡಮಕ್ಕಳಿಗೆ ವಸತಿ ನಿಲಯವನ್ನು ತಮ್ಮ ಸ್ವಂತ ಖರ್ಚಿನಿಂದಲೇ ಆರಂಭಿಸಿ, ನಂತರ ಅದಕ್ಕೆ ಸರಕಾರದ ನೆರವು ಪಡೆದುಕೊಂಡು ಸುಸಜ್ಜಿತ ಕಟ್ಟಡ ಮಾಡಿದರು. ಸದಾ ಚುಟುವಟಿಕೆಯಲ್ಲಿರುತ್ತಿದ್ದ ದುಂಡಪ್ಪನವರು ಎಲ್ಲರ ಪ್ರೀತಿಗೆ ಪಾತ್ರರಾದರು.ಇವರ ಸಾಧನೆಯ ಕುರಿತು ಈ ಕೃತಿ ಬೆಳಕು ಚೆಲ್ಲಿದೆ.
ಲೇಖಕ ಸುಭಾಶ್ಚಂದ್ರ ವಿ. ನಾವಿ ಅವರು ಕಡಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 20 ವರ್ಷಗಳಿಂದ ಶಿಕ್ಷಕರಾಗಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಲಾವಣಿಕಾರ ನಿಂಗಪ್ಪ(ಜೀವನ ಚರಿತ್ರೆ), ಪರಮಾತ್ಮನೊಬ್ಬನೇ ( ಲೇಖನಗಳ ಕೃತಿ) ...
READ MORE