‘ಮುಸ್ಲಿಂ ದೇಹ ಕನ್ನಡ ಮನಸ್ಸು’ ಕೃತಿಯು ಎಚ್.ಆಯ್. ತಿಮ್ಮಾಪೂರ ಅವರ ವ್ಯಕ್ತಿಗಳ ಕುರಿತ ಚಿತ್ರಣ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಮುಸಲ್ಮಾನರ ಕೊಡುಗೆ ಸ್ಮರಣೀಯವಾದುದು. ಅದರಲ್ಲೂ ಕರ್ನಾಟಕದಲ್ಲಿ ಸೂಫಿ ಸಂತರು, ಕವಿ-ಸಾಹಿತಿಗಳು, ಜಾನಪದ ಕಲಾವಿದರು ತಮ್ಮ ಅಮೋಘ ಕೃತಿಗಳ ಮೂಲಕ ಜನಮನದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದಾರೆ. ಅವರೆಲ್ಲರೂ ಭಾರತೀಯ ಸಂಸ್ಕೃತಿಯ ಘನತೆ ಗೌರವಗಳನ್ನು ಹೆಚ್ಚಿಸುತ್ತ ಬಂದಿದ್ದಾರೆ. ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅಮೂಲ್ಯ ಸೇವೆ ಸಲ್ಲಿಸಿದ ಅವರು ಕನ್ನಡಿಗರ ಪ್ರೀತಿ-ವಿಶ್ವಾಸಗಳನ್ನು ಪಡೆದು ಅಭಿನಂದನೀಯರೆನಿಸಿದ್ದಾರೆ. ಅವರು ಜಾತಿ-ಧರ್ಮ, ಮತ-ಪಂಥಗಳನ್ನು ಮೀರಿ ಬೆಳೆದವರೆಂಬುದು ಅಭಿಮಾನದ ಸಂಗತಿಯಾಗಿದೆ. ನಮ್ಮದು ಸಮನ್ವಯ ಸಂಸ್ಕೃತಿ, ಇಹ-ಪರ, ವ್ಯಕ್ತಿ-ಸಮಾಜ, ಧರ್ಮ-ದರ್ಶನ ಮುಂತಾದವುಗಳಲ್ಲಿ ಸಮನ್ವಯವನ್ನು ಸಾಧಿಸಿದಂತೆ ಧರ್ಮ-ಧರ್ಮಗಳಲ್ಲಿಯೂ ಸಮನ್ವಯವನ್ನು ಕಾಯ್ದುಕೊಂಡು ಬಂದ ಸಂಸ್ಕೃತಿ ನಮ್ಮದಾಗಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಅನೇಕ ಧರ್ಮ, ಜಾತಿ, ಮತ, ಪಂಥ ಮತ್ತು ಭಾಷೆಗಳಿಗೆ ಸಂಬಂಧಿಸಿದ ನಾವು ಸುಂದರ ತೋಟದ ಹೂಗಳಂತೆ ಕಂಗೊಳಿಸುತ್ತಿದ್ದೇವೆ. ಪ್ರೀತಿ-ವಿಶ್ವಾಸ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ನಮ್ಮ ದೇಶವು ಜಾತ್ಯಾತೀತ ಮತ್ತು ಧರ್ಮನಿರಪೇಕ್ಷ ರಾಷ್ಟ್ರವಾಗಿದೆ. ಭ್ರಾತೃತ್ವವೇ ನಮ್ಮ ಮೂಲದ್ರವ್ಯವಾಗಿದೆ. ಈ ದಿಶೆಯಲ್ಲಿ ಸೂಫಿ ಕವಿಗಳು, ಶಿಶುನಾಳದ ಶರೀಫ ಸಾಹೇಬರು, ಸಂಗೊಳ್ಳಿ ಮೋದಿನ ಸಾಹೇಬ, ಯಂಕಂಚಿಯ ಮಹಮ್ಮದ ಸಾಹೇಬ, ಕವಿಗಳಾದ ನಿಸ್ಸಾರ ಅಹ್ಮದ್, ಬಿ.ಎ. ಸನದಿ, ಎಂ. ಅಕಬರ ಅಲಿ, ಸಾರಾ ಅಬೂಬಕರ ಮುಂತಾದವರು ಈ ಸಮನ್ವಯ ಸಂಸ್ಕೃತಿಗೆ ತತ್ತ್ವಪದಗಳ ಹಾಗೂ ಸಾಹಿತ್ಯ ಕೃತಿಗಳ ಮೂಲಕ ಮೌಲಿಕ ಕೊಡುಗೆ ನೀಡಿದ್ದಾರೆ. 'ಮುಸ್ಲಿಂ ದೇಹ : ಕನ್ನಡ ಮನಸ್ಸು' ಎಂಬ ಕೃತಿಯಲ್ಲಿ ಡಾ. ಎಚ್.ಆಯ್. ತಿಮ್ಮಾಪೂರ ಅವರು ಕನ್ನಡ ಪ್ರಪಂಚಕ್ಕೆ ಮುಸ್ಲಿಂ ಬಾಂಧವರ ಈ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತ ಅಮೂಲ್ಯ ಕೃತಿಯೊಂದನ್ನು ನಮ್ಮ ಕೈಗಿತ್ತಿದ್ದಾರೆ ಎಂದಿದೆ.
ಎಚ್.ಎಸ್. ತಿಮ್ಮಾಪೂರ ಅವರು ಮೂಲತಃ ಬೆಳಗಾವಿಯವರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೃತ್ತಿಯಿಂದ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರಾಗಿರುವ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಹಾಗೂ ಬೆಳಗಾವಿಯಲ್ಲಿ 2003ರಲ್ಲಿ ಜರುಗಿದ ಅಖಿಲ ಭಾರತ 70ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಕೃತಿಗಳು: ಮುಸ್ಲಿಂ ದೇಹ ಕನ್ನಡ ಮನಸ್ಸು ...
READ MORE