ಭಾರತದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಅವರು ಅದ್ವಿತೀಯ ಸಾಧನೆ ಮಾಡಿದವರು. ಸಾರ್ವಜನಿಕ ಕಾರ್ಯಗಳಲ್ಲಿ ತುಂಬಾ ಆಸಕ್ತಿ ವಹಿಸುತ್ತಿದ್ದ ಅವರು ತಮ್ಮ ವ್ಯಕ್ತಿಗತ ಬದುಕಿನಲ್ಲಿ ಅತ್ಯಂತ ಶಿಸ್ತೀಯ ವ್ಯಕ್ತಿ. ಸರ್. ವಿಶ್ವೇಶ್ವರಯ್ಯ ಅವರು ನೂರು ವರ್ಷ ತುಂಬಿದ ನಿಮಿತ್ತ ಏರ್ಪಡಿಸಿದ ಸಮಾರಂಭದಲ್ಲಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಮೈಸೂರಿಗೆ ಆಗಮಿಸಿದ್ದು, ಆ ಸಮಾರಂಭದಲ್ಲಿ ಈ ಕೃತಿ ಬಿಡುಗಡೆ ಕಂಡಿತ್ತು. ವಿಶ್ವೇಶ್ವರಯ್ಯ ಅವರ ಜೀವನ-ಸಾಧನೆ ಕುರಿತು ಹೃದಯಂಗಮವಾಗಿ ವಿವರಿಸಿದ ಘಟನೆಗಳು-ಸನ್ನಿವೇಶಗಳು ಹಾಗೂ ವಿಶ್ವೇಶ್ವರಯ್ಯ ಅವರ ವ್ಯಕ್ತಿಗಳ ನಿರ್ಣಯಗಳು ಸಾರ್ವಜನಿಕರ ಬದುಕಿನ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.
ಪತ್ರಿಕಾರಂಗದ ಭೀಷ್ಮರಾಗಿದ್ದ ತೀ. ತಾ. ಶರ್ಮಾ ಅವರ ಬರಹದಲ್ಲಿಯ ವಿಷಯ ವೈವಿಧ್ಯತೆ ವಿಶಿಷ್ಟವಾಗಿದೆ. ಅವರು 1897 ಏಪ್ರಿಲ್ 27 ಕೋಲಾರದಲ್ಲಿ ಜನಿಸಿದರು. ಶಾಸನ, ಸಾಹಿತ್ಯ, ವಿಮರ್ಶೆ, ಇತಿಹಾಸ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ಹಸ್ತಪ್ರತಿ ಸಂಪಾದನೆ, ನೀಳ್ಗತೆ ಹೀಗೆ ವಿವಿಧ ಪ್ರಕಾರಗಳಿಗೆ ಸೇರಿದ ಸುಮಾರು ನಲ್ವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ‘ವಿಕ್ರಾಂತ ಭಾರತ’, ‘ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ’, ‘ವಿಚಾರ ಕರ್ನಾಟಕ’ ಕೃತಿಗಳ ಮೂಲಕ ಶರ್ಮರ ದೇಶಾಭಿಮಾನದ ಸುದೀರ್ಘ ಅರಿವು ಮೂಡುತ್ತದೆ. ಇತಿಹಾಸ ಸಂಶೋಧನೆಯಲ್ಲಿ ‘ಜಗನ್ಮೋಹನ ಬಂಗಲೆಯಿಂದ ವಿದುರಾಶ್ವತ್ಥದವರೆಗೆ’, ‘ಚಾರಿತ್ರಿಕ ದಾಖಲೆಗಳು’, ‘ಇತಿಹಾಸದ ಸಂದರ್ಭಗಳು’, ಹಾಗೂ ‘ಮೈಸೂರು ಇತಿಹಾಸದ ...
READ MORE