ವಿಶ್ವೇಶ್ವರ ಭಟ್ ರವರು `ಬ್ಲಿಟ್ಜ್' ಪತ್ರಿಕೆ ಸಂಪಾದಕ ರುಸ್ಸಿ ಕರಂಜಿಯಾ ಬಗ್ಗೆ ಬರೆದ ವ್ಯಕ್ತಿಚಿತ್ರವಿದು. ಕನ್ನಡದಲ್ಲಿ ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ಅಷ್ಟೇನೂ ಪರಿಚಿತವಾಗುವುದಕ್ಕೆ ಎಷ್ಟೋ ವರ್ಷಗಳ ಮೊದಲು, ಕರಂಜಿಯಾ `ಬ್ಲಿಟ್ಜ್'ನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದರು. ಅಷ್ಟೇ ಅಲ್ಲ, ಪತ್ರಿಕೆಗಿಂತ ಎತ್ತರಕ್ಕೆ ತಾವೂ ಬೆಳೆದಿದ್ದರು. ಒಬ್ಬ ಪತ್ರಕರ್ತ ತನ್ನ ಜೀವಿತ ಅವಧಿಯಲ್ಲಿ ಪಡೆಯಬಹುದಾದ ಖ್ಯಾತಿ, ಹಣ, ಜನಪ್ರಿಯತೆ, ಟೀಕೆ ಹಾಗೂ ಕುಖ್ಯಾತಿಯೆಲ್ಲವನ್ನೂ ಕರಂಜಿಯಾ ಪಡೆದಿದ್ದರು. ಅವರ ವ್ಯಕ್ತಿತ್ವದ ಅನೇಕ ಮುಖಗಳ ಚಿತ್ರಣ ಇಲ್ಲಿದೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE