ಬ್ಯಾಸರಿಲ್ಲದ ಜೀವ

Author : ಕಾವ್ಯಶ್ರೀ ಮಹಾಗಾಂವಕರ

Pages 244

₹ 280.00




Year of Publication: 2019
Published by: ದೇಸಿ ಪುಸ್ತಕ ಪ್ರಕಾಶನ
Address: #121, 13ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು-560040
Phone: 9448439998

Synopsys

ಲೇಖಕಿ ಕಾವ್ಯಶ್ರೀ ಮಹಾಗಾಂವಕರ ಅವರ ಕೃತಿ-ಬ್ಯಾಸರಿಲ್ಲದ ಜೀವ. ಲೈಫ್ ಗುರುವಿನ ಲೈಫ್ ಎಂಬ ಉಪಶೀರ್ಷಿಕೆಯಡಿ ಕವಿ ಸಿದ್ದು ಯಾಪಲಪರವಿ ಅವರ ಬದುಕು-ಸಾಹಿತ್ಯಕ ಸಾಧನೆ ಕುರಿತು ವಿವರಿಸುವ ಕೃತಿ ಇದು. ಬದುಕಿನ ಹತಾಶೆ-ನಿರಾಶೆಗಳಿಗೆ ಬೇಸರಗೊಳ್ಳದೇ ಬದುಕನ್ನು ಪ್ರೀತಿಸುವ ಅವರ ವ್ಯಕ್ತಿತ್ವದ ಘನತೆ-ಗೌರವವನ್ನು ಕೃತಿಯಲ್ಲಿ ಬಣ್ಣಿಸಲಾಗಿದೆ.

ಗದುಗಿನ ತಿಮ್ಮಾಪುರದ ಕೆ.ವಿ.ಎಸ್.ಆರ್. ಕಾಲೇಜಿನ ಪ್ರಾಚಾರ್ಯ ಸಿದ್ದು ಯಾಪಲಪರವಿ ಅವರ ಬದುಕಿನ ವಿಪರ್ಯಾಸಗಳು, ಅವುಗಳನ್ನು ಮೀರಿದ ಬಗೆ, ಜೀವನ ಪ್ರೀತಿ, ನಯ-ವಿನಯಗಳನ್ನು ರೂಢಿಸಿಕೊಂಡ ಮೌಲ್ಯಗಳು ಲೇಖಕಿಯ ಮಾತಿನಲ್ಲೇ ಹೇಳುವುದಾದರೆ ‘ಸಿದ್ದು' ಎನ್ನುವ ಜವಾರಿ ಹುಡುಗ ಅನುಭವಿಸುವ ಹಸಿವು, ಬಡತನ, ಅಪಮಾನ, ನಿರುದ್ಯೋಗ, ನೋವು, ದುಃಖ, ಹೃದಯ ಕಲಕುತ್ತದೆ. ನಮ್ಮ ಸಮಾಜದಲ್ಲಿ ಸಿದ್ದುವಿನಂತಹ ಅನೇಕ ಜೀವಗಳಿರಬಹುದು. ಅಂಥವರ ಪಾಲಿಗೆ ಈ 'ಬ್ಯಾಸರಿಲ್ಲದ ಜೀವ' ಖಂಡಿತ ಮಾರ್ಗದರ್ಶಕ’ ಎಂದು ಅಭಿಪ್ರಾಯಪಟ್ಟಿದ್ದು, ಕೃತಿ ರಚನೆಯ ಉದ್ದೇಶವನ್ನೂ ಸ್ಪಷ್ಟಪಡಿಸಿದ್ದಾರೆ. 

About the Author

ಕಾವ್ಯಶ್ರೀ ಮಹಾಗಾಂವಕರ
(11 April 1969)

ಲೇಖಕಿ, ಕಾವ್ಯಶ್ರೀ ಮಹಾಗಾಂವಕರ‌ ಮೂಲತಃ ಬೀದರನವರು. ‘ಸಿಕಾ’ ಎಂಬುದು ಇವರ ಕಾವ್ಯನಾಮ. ತಂದೆ  ಬಿ.ಜಿ.ಸಿದ್ದಬಟ್ಟೆ, ತಾಯಿ ಯಶೋದಮ್ಮ ಸಿದ್ದಬಟ್ಟೆ. ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.  ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರೆ. . ಕೃತಿಗಳು: 'ಪ್ರೇಮ ಕಾವ್ಯ' (2006) ಕಾದಂಬರಿ, 'ಬೆಳಕಿನೆಡೆಗೆ' (2008) ಕಥಾ ಸಂಕಲನ , ಪ್ರಳಯದಲ್ಲೊಂದು ಪ್ರಣತಿ' (2013) ಕಥಾ ಸಂಕಲನ, 'ಜೀವಜಗತ್ತಿಗೆ ಜೇನಹನಿ' (2015) ವಿಮರ್ಶಾ ಬರಹ , ಪಿಸುಮಾತುಗಳ ...

READ MORE

Related Books