ಹಗಲಿನಲ್ಲಿಯೆ ಸಂಜೆಯಾಯಿತು

Author : ಸಿದ್ದು ಯಾಪಲಪರವಿ

Pages 206

₹ 200.00




Year of Publication: 2021
Published by: ದಲಿತ ಸಾಹಿತ್ಯ ಪರಿಷತ್ತು(ರಿ)
Address: ರಾಜ್ಯ ಘಟಕ,ಗದಗ
Phone: 9448789322

Synopsys

ಲೇಖಕ ಸಿದ್ದು ಯಾಪಲಪರವಿ ಅವರ ಕೃತಿ ‘ಹಗಲಿನಲ್ಲಿಯೆ ಸಂಜೆಯಾಯಿತು’. ಡಾ.ತೋಂಟದ ಸಿದ್ಧಲಿಂಗ ಸ್ವಾಮೀನಿಜಿಗಳೊಂದಿಗಿನ ಸ್ಮರಣೀಯ ಘಟನೆಗಳನ್ನು ಹೊತ್ತ ಕೃತಿಯಿದು. 2021ರ ಅಗಸ್ಟ್ ತಿಂಗಳಿನಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ, 2021ರ ಅಕ್ಟೋಬರ್ ನಲ್ಲಿ ಮೂರನೇ ಮುದ್ರಣ ಕಂಡಿದೆ.

ಕೃತಿಯಲ್ಲಿ ಸಹಸ್ಪಂದನೆ ಮಾತುಗಳನ್ನು ಹಿರೇಮಠ ಸಂಸ್ಥಾನದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಮೂರುಸಾವಿರ ಮಠದ ಶ್ರೀ ನೀಲಕಂಠ ಮಹಸ್ವಾಮಿಗಳು, ಸಾಹಿತಿ ಚಂದ್ರಶೇಖರ ವಸ್ತ್ರದ, ಸಾಹಿತಿ ನಿಂಗು ಸೊಲಗಿ, ಸಾಹಿತಿ ಸುಧಾ ಹುಚ್ಚಣ್ಣವರ ಅವರು ಬರೆದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ 25 ಅಧ್ಯಾಯಗಳಿದ್ದು, ಮೊದಲ ದರ್ಶನದ ಪುಳಕ, ತೋಂಟದಾರ್ಯ ಮಠದ ಜಾತ್ರೆ, ಪಾದಯಾತ್ರೆಯ ಫಲಶೃತಿ, ಕವಿ-ಸಾಹಿತಿ-ಸಂತ, ಸಾವಿರದ ಶಿವಾನುಭವಗಳು, ಬದಲಾವಣೆಯ ಪರ್ವ, ಅಧ್ಯಯನ ಸಂಸ್ಥೆಯ ಅಭ್ಯುದಯ, ಮಠದ ಬೌದ್ಧಿಕ ಚೇತನ: ಡಾ.ಕಲಬುರ್ಗಿ, ಕನ್ನಡ ಕಾನ್ವೆಂಟ್ ಶಾಲೆಗಳು, ಭಕ್ತರೇ ಮಠದ ಸಂಪತ್ತು, ನನಸಾಗಲಿ ಕನಸುಗಳು, ಧರ್ಮ ರಾಜಕಾರಣ, ಕಾರೇ ಇಲ್ಲದ ಜಗದ್ಗುರುಗಳು, ವಿವಾದಗಳ ವಿಷಾದ, ಸರ್ವಧರ್ಮ ಸಮನ್ವಯತೆ, ವಿದೇಶ ಪಯಣದ ನೆಮ್ಮದಿ ಹೀಗೆ ಅನೇಕ ಶೀರ್ಷಿಕೆಗಳನ್ನು ಹೊಂದಿದೆ.

About the Author

ಸಿದ್ದು ಯಾಪಲಪರವಿ
(12 April 1965)

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ  ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ.  1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...

READ MORE

Related Books