ಎಡಿತ್ ಎಗರ್ ಉಡುಗೊರೆ

Author : ಶಿವಾನಂದ ಬೇಕಲ್

Pages 206

₹ 269.00




Year of Publication: 2021
Published by: ಮಂಜುಳಾ ಪಬ್ಲಿಷಿಂಗ್
Address: ಕೇರಳ

Synopsys

ಮೂಲದಲ್ಲಿ ಲೇಖಕ ಓಪ್ರಾ ಎಂಬುವರ ‘ಎಡಿತ್ ಎಗರ್ ಉಡುಗೊರೆ’ ಕೃತಿಯನ್ನು ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಎಡಿತ್ ಎಗರ್ ನ ಜೀವನ ಕುರಿತ ಕೃತಿ ಇದು. ಈ ಕೃತಿಯು ಬದುಕನ್ನು ರಕ್ಷಿಸುವ 12 ಪಾಠಗಳನ್ನು ಒಳಗೊಂಡಿದೆ. ಬದುಕಿನಲ್ಲಿ ಕಟ್ಟಕಡೆಗೆ, ನಮಗೇನಾಗುತ್ತದೆ ಎಂಬುದು ಮುಖ್ಯವಲ್ಲ-ನಾವು ಅದನ್ನು ಆಯ್ದುಕೊಂಡು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ ಎನ್ನುತ್ತದೆ ಈ ಕೃತಿ.

ನಾವೆಲ್ಲರೂ ಯಾತನೆಯನ್ನು ಎದುರಿಸಿದ್ದೇವೆ- ಬೇಸರ, ನಷ್ಟ, ಹತಾಶೆ, ಭಯ, ಆತಂಕ, ಸೋಲು ಇತ್ಯಾದಿ. ಆದರೆ ನಮಗೆ ಆಯ್ಕೆಯ ಅವಕಾಶವೂ ಇರುತ್ತದೆ; ಮಾನಸಿಕವಾಗಿ ಪೆಟ್ಟುಬಿದ್ದಾಗ ಅಥವಾ ಕಷ್ಟದ ಸಮಯದ ಹೊಡೆತದಿಂದಾಗಿ ಕೈಚೆಲ್ಲಿಬಿಡುವ ಸಾಧ್ಯತೆ ಒಂದೆಡೆಯಾದರೆ, ಪ್ರತಿಯೊಂದು ಕ್ಷಣವನ್ನು ಒಂದು ಉಡುಗೊರೆಯಾಗಿ ಸ್ವೀಕರಿಸಿ ಜೀವಿಸಲೂ ಸಾಧ್ಯವಿದೆ. ಡಾ. ಎಡಿತ್ ಎಗರ್ ಓರ್ವ ಪ್ರಸಿದ್ಧ ಮನಃಶಾಸ್ತ್ರಜ್ಞರಾಗಿದ್ದು, ಎರಡನೇ ಜಾಗತಿಕ ಯುದ್ಧದ ಸಮಯದ ಮಾನವ ಹತ್ಯಾಕಾಂಡದಿಂದ ಬದುಕಿ ಉಳಿದು ಬಂದ ಕೆಲವೇ ಕೆಲವು ಮಂದಿಯಲ್ಲಿ ಒಬ್ಬರಾಗಿದ್ದಾರೆ. ಎಗರ್ ಅವರ ಸ್ವಂತ ಬದುಕಿನ ಕಥೆಗಳ ಮತ್ತು ಅವರ ರೋಗಿಗಳ ಜೀವಂತ ಘಟನೆಗಳ ಜಾಡಿನಲ್ಲಿ ನಾವು ಸಾಗಿದೆವೆಂದರೆ, ಅವರ ಸ್ಪೂರ್ತಿದಾಯಕ ಪಾಠಗಳು ನಮಗೆ ನಮ್ಮ ಬದುಕಿನ ಅತ್ಯಂತ ಕತ್ತಲೆಯ ಕ್ಷಣಗಳು ಮಹೋನ್ನತ ಬೋಧನೆಗಳಾಗಿ ಪರಿಣಮಿಸುವುದರಲ್ಲಿ ಸಂದೇಹವಿರಲಾರದು ಎನ್ನುತ್ತಾರೆ ಲೇಖಕರು.

 

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books