ಕೆಳದಿ ಚೆನ್ನಮ್ಮ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಶಾಂತಾದೇವಿ ಮಾಳವಾಡ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ 1671 ರಿಂದ 1696 ರವರೆಗೆ ಕೆಳದಿ ಸಂಸ್ಥಾನವನ್ನಾಳಿದ ರಾಣಿ. ಶೌರ್ಯ, ವಿವೇಕ, ಧಾರ್ಮಿಕ ಬುದ್ಧಿಗಳ ಗಣಿ. ಗಂಡನ ಅವಿವೇಕದಿಂದ ರಾಜ್ಯದಲ್ಲಿ ಅವ್ಯವಸ್ಥೆ ತಲೆದೋರಿದಾಗ ರಾಜ್ಯಕ್ಕೆ ರಕ್ಷೆಯಾದಳು. ಮೊಗಲ ಚಕ್ರವರ್ತಿ ಔರಂಗಜೇಬನಿಗೆ ಹೆದರದೆ ಶಿವಾಜಿ ಮಹಾರಾಜನ ಮಗ ರಾಜಾರಾಮನಿಗೆ ರಕ್ಷಣೆ ಕೊಟ್ಟ ವೀರಶ್ರೀ ಎಂದು ಕೆಳದಿ ಚೆನ್ನಮ್ಮನನ್ನು ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಕೆಳದಿ ಚೆನ್ನಮ್ಮ ಅವರ ಬಾಲ್ಯ ಜೀವನ, ಆಡಳಿತ ವೈಖರಿ, ಪ್ರಜೆಗಳೊಂದಿಗೆ ಹೊಂದಿದ ಬಾಂಧವ್ಯ ಹೀಗೆ ಅವರ ಬಾಳಿನ ವಿವಧ ಆಯಾಮಗಳನ್ನು ಲೇಖಕಿ ಇಲ್ಲಿ ಚಿತ್ರಿಸಿದ್ದಾರೆ.
ಲೇಖಕಿ ಶಾಂತಾದೇವಿ ಮಾಳವಾಡ ಅವರ ಹುಟ್ಟೂರು ಬೆಳಗಾವಿ. ತಂದೆ ಮುರಿಗೆಪ್ಪಶೆಟ್ಟಿ, ತಾಯಿ ಜಯವಂತಿದೇವಿ. ಹಿರಿಯ ಲೇಖಕ ಡಾ. ಸ.ಸ. ಮಾಳವಾಡರ ಪತ್ನಿ. ಗೃಹಿಣಿಯಾಗಿದ್ದ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1978) ಜ.ಚ.ನಿ. ಬೆಳ್ಳಿಹಬ್ಬ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಬಾಗಲಕೋಟೆಯಲ್ಲಿ (1999) ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ಗಿದರು. ಕನ್ನಡ ಸಾಹಿತ್ಯ ಪರಿಷತ್ತು 'ಗೌರವ ಸದಸ್ಯತ್ವ' ನೀಡಿ ಸನ್ಮಾನಿಸಿದೆ. ಕನ್ನಡ ತಾಯಿ, ಕೆಳದಿ ಚೆನ್ನಮ್ಮ (ಜೀವನ ಚರಿತ್ರೆ), ಸಮುಚ್ಚಯ. ವಧುವಿಗೆ ಉಡುಗೊರೆ (ಪ್ರಬಂಧ), ಮೊಗ್ಗೆಯ ಮಾಲೆ (ಕಥಾಸಂಕಲನ), ಸೊಬಗಿನ ಮನೆ (ಗೃಹಾಲಂಕಾರ), ಶ್ರೀ ...
READ MORE