ಥೋರೋ

Author : ಎಸ್.ಬಿ. ಗಜೇಂದ್ರ ಘಡ್

Pages 92

₹ 6.00




Year of Publication: 1989
Published by: ಪ್ರಸಾರಾಂಗ
Address: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು- 560056

Synopsys

ಥೋರೋ ಬೆಂಗಳೂರು ಪ್ರಸಾರಾಂಗದ ಮನೆಗೊಂದು ಮಣಿದೀಪ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಪುಸ್ತಕ ಮಾಲೆಯಲ್ಲಿ ಶ್ರೀ ಎಸ್.ಬಿ. ಗಜೇಂದ್ರ ಗಡ್ ಅವರು ಬರೆದ ಥೋರೋ ಎಂಬ ಕೃತಿಯನ್ನು ಅತ್ಯಂತ ಸಂತೋಷದಿಂದ ಮನೆ ಮನೆಯೊಳಗಿನ ಓದುಗರ ವರ್ಗಕ್ಕೆ ವಿಶ್ವವಿದ್ಯಾಲಯವು ಪ್ರಕಟಿಸಿದೆ. ಕಳೆದ ಶತಮಾನದಲ್ಲಿ ಭಾರತೀಯ ಚಿಂತನೆಗಳಿಂದ ಪ್ರಭಾವಿತರಾದ ಹಲವು ಪಾಶ್ಚಿಮಾತ್ಯ ಲೇಖಕರಲ್ಲಿ ಅಮೆರಿಕಾ ಎಮರ್ಸನ್, ವಾಲ್ಟ್ ವ್ಹೀ ಟಮನ್ ಮತ್ತು ಡೇವಿಡ್ ಥೋರೋ ಇವರು ಮುಖ್ಯರಾದವರು. ಈ ಮೂವರೂ ಸಮಕಾಲೀನರು. ಇವರಲ್ಲಿ ಥೋರೋ ಅತ್ಯಂತ ವಿಶಿಷ್ಟವಾದ ವ್ಯಕ್ತಿ. ಸಮಕಾಲೀನ ಯಂತ್ರನಾಗರಿಕತೆಯ ಗಡಿಬಿಡಿಯ ವ್ಯಾವಹಾರಿಕ ಜಗತ್ತಿನಿಂದ ದೂರ ಸರಿದು, ಒಳನಾಡುಗಳ ನಿಸರ್ಗ ಸೌಂದರ್ಯದ ನಡುವೆ ತನ್ನ ಬದುಕನ್ನು ಹಾಗೂ ಚಿಂತನೆಗಳನ್ನು ರೂಪಿಸಿಕೊಂಡವನು. ಜನಸಂಗ ದೂರವಾದ ವಾಲ್ಟನ್ ಸರೋವರದ ನಿಸರ್ಗ ರಮ್ಯತೆಯ ನಡುವೆ ಗುಡಿಸಲೊಂದನ್ನ ಕಟ್ಟಿಕೊಂಡು ನೆಲವನ್ನು ತಾನೇ ಉತ್ತು-ಬಿತ್ತಿ-ಬೆಳೆದು, ತೀರಾ ಸರಳವಾದ ಜೀವನವನ್ನು ನಡೆಸುತ್ತ ಚಿಂತನೆ ಹಾಗೂ ಧ್ಯಾನದಿಂದ ಮನಸ್ಸನ್ನು ಪರಿಷ್ಕರಿಸಿಕೊಳ್ಳುತ್ತ ಋಷಿಯಂತೆ ಬದುಕಿದವನು. ಹಾಗೆಂದು ಆತ ಜೀವನಕ್ಕೆ ವಿಮುಖನಾದ ಪಲಾಯನವಾದಿಯಾಗಲಿಲ್ಲ. ಅಂದಿನ ಸರ್ಕಾರದ ಯುದ್ಧ ನೀತಿಯನ್ನೂ, ಗುಲಾಮರ ಅದು ತಾಳಿದ ಅಮಾನವೀಯ ಧೋರಣೆಗಳನ್ನೂ ಪ್ರತಿಭಟಿಸುತ್ತಾ. ಕರನಿರಾಕರಣೆ ಮಾಡಿ ಸರ್ಕಾರದ ನ್ಯಾಯವನ್ನು ಮುರಿದು ಬಂಧನಕ್ಕೆ ಒಳಗಾಗುತ್ತ ಅಮೆರಿಕಾದ ಮೂಲನಿವಾಸಿಗಳಾದ ರೆಡ್ ಇಂಡಿಯನ್ ಜನರ ಜತೆ ಸಹಾನುಭೂತಿಯಿಂದ ಸಂಪರ್ಕ ಬೆಳೆಸಿ ಅವರ ಸಂಸ್ಕೃತಿಯನ್ನು ಅಧ್ಯಯನ ಮಾಡುತ್ತಾ . ಅಂದಿನ ಮುಖ್ಯ ಸಾಹಿತಿಗಳೊಡನೆ ಸಂವಾದಿಸುತ್ತಾ, ಉಪನ್ಯಾಸಗಳನ್ನು ಮಾಡುತ್ತಾ ಲೇಖನಗಳನ್ನು ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಾ ಅತ್ಯಂತ ಕ್ರಿಯಾಶಾಲಿಯಾಗಿ ಬದುಕಿದನು ಅವರ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಕೃತಿ ರಚಿತವಾಗಿದೆ.

Related Books