ಪ್ರಾಮಾಣಿಕತೆಯ ಪ್ರವಾದಿ ಕಡಿದಾಳು ಮಂಜಪ್ಪ

Author : ನೆಂಪೆ ದೇವರಾಜ್

Pages 158

₹ 170.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಬಿ.ಜಿ. ನಗರ- 571448, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ
Phone: 9481908555

Synopsys

`ಪ್ರಾಮಾಣಿಕತೆಯ ಪ್ರವಾದಿ ಕಡಿದಾಳು ಮಂಜಪ್ಪ’ ಕೃತಿಯು ನೆಂಪೆ ದೇವರಾಜ್ ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಈ ಕೃತಿಯಲ್ಲಿನ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳನ್ನು ಹೀಗೆ ವಿಶ್ಲೇಷಿಸಲಾಗಿದೆ : ಅತ್ಯಂತ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಸತ್ಯನಿಷ್ಠೆ, ಪ್ರಾಮಾಣಿಕತೆಯಿಂದ ಕರ್ನಾಟಕದ ಮನೆಮಾತಾಗಿದ್ದವರು ಕಡಿದಾಳು ಮಂಜಪ್ಪನವರು. ಸ್ವಾತಂತ್ರ್ಯ ಚಳವಳಿ, ರಾಜಕೀಯ, ಗೇಣಿದಾರರ ಪರ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಕಡಿದಾಳರು ಕರ್ನಾಟಕದಲ್ಲಿ ಭೂಸುಧಾರಣ ಕಾನೂನು ಜಾಲಿಗೆ ಬರಲು ಕಾರಣರಾದವರಲ್ಲಿ ಪ್ರಮುಖರು. ಸ್ವತಃ ಗೇಣಿದಾರ ಕುಟುಂಬದಿಂದ ಬಂದಿದ್ದ ಅವರು ಮಲೆನಾಡಿನ ರೈತರ ರಕ್ತಹೀರುತ್ತಿದ್ದ ಗೇಣಿ ಪದ್ಧತಿಯ ಕೌಲ್ಯವನ್ನು ಕಂಡವರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿದ್ದ ಕಡಿದಾಳರು ಸತ್ಯ, ಅಹಿಂಸೆ, ಸರಳ ಜೀವನ, ಸ್ವಾಭಿಮಾನಕ್ಕೆ ಹೆಸರಾದವರು, ಅಂದಿನ ಮೈಸೂರು ರಾಜ್ಯದ ಮಂತ್ರಿ, ಮುಖ್ಯಮಂತ್ರಿಯಾಗಿದ್ದವರು. ವಕೀಲ ವೃತ್ತಿಯಿಂದ ಜೀವನ ಸಾಗಿಸಿದ ಪರಮಕರ್ಮಯೋಗಿ ಎಷ್ಟೇ ಒತ್ತಾಯವಿದ್ದರೂ ಸರ್ಕಾರದಿಂದ ಯಾವುದೇ ಲಾಭ ಪಡೆಯದ ಸ್ವಾಭಿಮಾನಿ ಅವರು ರಾಜಕಾರಣಿ ಮಾತ್ರವಲ್ಲ, ಲೇಖಕ ಕೂಡ ಅನೇಕ ಸಾಹಿತ್ಯ ಕೃತಿಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಕಣ್ಮರೆಯಾಗುತ್ತಿರುವ ಜೀವನ ಮೌಲ್ಯಗಳು, ಭ್ರಷ್ಟಗೊಳುತ್ತಿರುವ ಆಡಳಿತ ವ್ಯವಸ್ಥೆ, ಜನನಾಯಕರ ಕಳಕಿಂತ ವ್ಯಕ್ತಿತ್ವ ಕುರಿತು ಆಕ್ರೋಶ ವ್ಯಕ್ತವಾಗಿದೆ. ತ್ರಿಕರಣಪೂರ್ವಕ ಶುದ್ಧರಾಗಿದ್ದ ಕಡಿದಾಳರ ಜೀವನ ಸಾಧನೆ ಕುರಿತು ಲೇಖಕ ನೆಂಪೆ ದೇವರಾಜ್ 'ಪ್ರಾಮಾಣಿಕತೆಯ ಪ್ರವಾದಿ ಕಡಿದಾಳು ಮಂಜಪ್ಪ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ ಎಂದಿದೆ.

About the Author

ನೆಂಪೆ ದೇವರಾಜ್

ನೆಂಪೆ ದೇವರಾಜ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ತುಮಕೂರಿನ ಶ್ರೀ ಸಿದ್ದಾರ್ಥ ಪದವಿ ಕಾಲೇಜು ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿರುತ್ತಾರೆ. ಮಲೆನಾಡಿನಾದ್ಯಂತ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹವನ್ನು ಚಳವಳಿಯೋಪಾದಿಯಲ್ಲಿ ವಿಸ್ತರಿಸಬೇಕೆಂಬ ಅಭಿಲಾಷೆಯಿಂದ ಈವರೆಗೂ ನೂರಾರು ಮಂತ್ರ ಮಾಂಗಲ್ಯ ವಿವಾಹ ನಡೆಸಿಕೊಟ್ಟಿರುತ್ತಾರೆ. ಕೃತಿಗಳು : ಆದ್ರೆ ಮಳೇಲಿ ಆದವ್ನೇ ಗಂಡ, ನವಿಲು ಕಲ್ಲು( ಕುವೆಂಪು ಅವರ ಶತಮಾನೋತ್ಸವದ ನೆನಪಿಗೆ ಹೊರ ತಂದ ಕೃತಿ), ಪ್ರಾಮಾಣಿಕತೆಯ ಪ್ರವಾದಿ ಕಡಿದಾಳು ಮಂಜಪ್ಪ. ...

READ MORE

Related Books