ಸೋಲು, ಗೆಲುವು ಎಲ್ಲರ ಬದುಕಿನಲ್ಲೂ ಇರುವಂಥದ್ದೇ. ’ಸೋತಾಗ ತಗ್ಗುವುದು, ಗೆದ್ದಾಗ ಬೀಗುವುದು ತಿಳಿದಿರುವುದೇ’. ಯಾವುದೇ ಕಾರಣಕ್ಕೆ ಸೋಲಬೇಕಾಗಿ ಬಂದರೂ ಕೆಲವರು ತಲೆ ತಗ್ಗಿಸುವುದಿಲ್ಲ. ಹೆದರುವುದಿಲ್ಲ. ಮೌನ ತಾಳುವುದಿಲ್ಲ, ಸುಮ್ಮನೇ ಕೂರುವುದಿಲ್ಲ. ಇವರೇ ಸೋಲಿಲ್ಲದ (ಸೋಲರಿಯದ) ಸರದಾರರು’. ಏನಾದರೂ ಸಾಧಿಸಬೇಕು ಎನ್ನುವವರಿಗೆ ಸ್ಫೂರ್ತಿ ಕೊಡುತ್ತಾರೆ. ಮಾದರಿಯಾಗುತ್ತಾರೆ, ದಾರಿ ದೀಪವಾಗಿ ನಿಲ್ಲುತ್ತಾರೆ. ಇಂತಹವರ ಜೀವನ ಚಿತ್ರಣವನ್ನು ಸೋಲಿಲ್ಲದ ಸರದಾರರು ಕೃತಿಯಲ್ಲಿ ಬರೆದಿದ್ದಾರೆ.
ಲೇಖಕ ಸಂಪಟೂರು ವಿಶ್ವನಾಥ್ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...
READ MORE