`ಕೋಟಿ-ಚೆನ್ನಯ' ಎಂಬುದು ಒಂದು ವೀರಗಾಥೆ. ಲೇಖಕ ಕಾಕೆಮಾನಿ ರಚಿಸಿದ್ದಾರೆ. ತುಳುನಾಡಿನ ವೀರ ಸೋದರರು. ದರ್ಪಕ್ಕೆ, ಮೃಗಶಕ್ತಿಗೆ ತಲೆಬಾಗದೆ ನ್ಯಾಯಕ್ಕಾಗಿ, ಆತ್ಮಗೌರವಕ್ಕಾಗಿ ಹೋರಾಡಿದ ಧೀರರ ಜೀವನಚರಿತ್ರೆಯಿದೆ. ಕೋಟಿ-ಚೆನ್ನಯ ಅವಳಿ ಪುತ್ರರ ಜನನದ ಹಿನ್ನಲೆ, ಬಾಲ್ಯ ಜೀವನ, ಪಡುಮಲೆ ಅರಸನ ಜೊತೆಗಿನ ಒಡನಾಟ,ಯುದ್ದ, ಗರಡಿ ಹೀಗೆ ತುಳುನಾಡಿನ ಅನೇಕ ವಿಚಾಧಾರೆಗಳನ್ನು ಆಧರಿಸಿ ಇವರ ಕೊಡುಗೆ ಮತ್ತು ಬದುಕಿನ ಏರುಪೇರುಗಳನ್ನು ಲೇಖಕರು ಸುಂದರವಾಗಿ ಸರಳ ಕನ್ಡಡದಲ್ಲಿ ಚಿತ್ರಿಸಿದ್ದಾರೆ.
ರೋಚಕ ಕತೆಗಳ ಮೂಲಕ ಗುರುತಿಸಿಕೊಂಡ ಲೇಖಕ ಬಿ.ಡಿ. ಸುಬ್ಬಯ್ಯ ಅವರು ಮೂಲತಃ ವಿರಾಜಪೇಟೆ ತಾಲೂಕಿನ ಬೆಸಗೂರು ಗ್ರಾಮದವರು. ಬಾಚಮಾಡ ಮನೆತನದ ಕಾಕೆಮಾನಿ ಎಂಬ ಸ್ಥಳದಲ್ಲಿ ಜನಿಸಿದರು. ಆದ್ದರಿಂದ ಇವರ ಕಾವ್ಯನಾಮ ಕಾಕೆಮಾನಿ. ಇವರ ತಂದೆ ದೇವಯ್ಯ, ತಾಯಿ- ಮಾಚವ್ವ. ಪೊನ್ನಂಪೇಟೆಯ ಹೈಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಕೊಡಗು ಪತ್ರಿಕೆಯ ಸಂಪಾದಕರಾಗಿದ್ದರು. ಬ್ರಿಟೀಷರ ಆಡಳಿತದಲ್ಲಿ ಅರಣ್ಯ ಇಲಾಖೆಯನ್ನು ಸೇರಿ ರೇಂಜರ್ ಆಗಿ ಬಡ್ತಿ ಹೊಂದಿ ಅಂಡಮಾನಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅಂಡಮಾನಿನ ಅನುಭವಗಳನ್ನು ಜರುವಾ ಮತ್ತು ಸಾಂಪೆನ್ಸ್ ಆದಿವಾಸಿಗಳ ಬದುಕನ್ನು ಆಧಾರವಾಗಿಟ್ಟುಕೊಂಡು ಬಿಲ್ಲು-ಬಾಣ ಎಂಬ ಕತಾಸಂಕಲವನ್ನು ಪ್ರಕಟಿಸಿದ್ದಾರೆ. ನರಭಕ್ಷಕ ಜೀವನವನ್ನು ಮೈನವಿರೇಳಿಸುವಂತೆ ...
READ MORE