‘ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ’ ಲೇಖಕ ಮ.ಸು. ಮನ್ನಾರ್ ಕೃಷ್ಣರಾವ್ ಅವರು ರಚಿಸಿರುವ ಕೃತಿ. ಭಾರತದ ಕೈಗಾರಿಕಾ ಕ್ಷೇತ್ರದ ಟಾಟಾ ಮತ್ತು ಬಿರ್ಲಾ ಕುಟುಂಬಗಳು. ಲಕ್ಷಾಂತರ ಯುವಕ ಯುವತಿಯರಿಗೆ ವೃತ್ತಿಯನ್ನು ಕಲ್ಪಿಸಿದ ಕುಟುಂಬಗಳು.
ಬಿರ್ಲಾ ಕುಟುಂಬದಲ್ಲಿ ಶಿಖರಪ್ರಾಯ ವ್ಯಕ್ತಿತ್ವ ಘನಶ್ಯಾಂ ದಾಸ್ ಬಿರ್ಲಾ ಅವರದ್ದು. ಇವರನ್ನು ಕುರಿತು ಇಂಗ್ಲಿಷಷಿನಲ್ಲಿ ಹಲವಾರು ಕೃತಿಗಳು ಪ್ರಕಟವಾಗಿವೆ. ನೂರಾರು ಲೇಖನಗಳು ಬೆಳಕು ಕಂಡಿವೆ. ಪ್ರಕಟಿತ ಸಾಹಿತ್ಯದ ಬಹುಪಾಲನ್ನು ಅಧ್ಯಯನ ಮಾಡಿ, ಸುಮಾರು 50 ಚಿಕ್ಕ ಚಿಕ್ಕ ಅಧ್ಯಾಯಗಳ, 320 ಪುಟಗಳ, ಆದರೆ ಸಮಗ್ರವಾದ ಈ ಕೃತಿಯನ್ನು ಮನ್ನಾರ್ ಕೃಷ್ಣರಾವ್ ಅವರು ಅರ್ಥಪೂರ್ಣವಾಗಿ ರಚಿಸಿದ್ದಾರೆ.
ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...
READ MORE