ಕನ್ನಡ ವೃತ್ತಿ ರಂಗಭೂಮಿಗೆ ಮೆರಗನ್ನು ತಂದುಕೊಟ್ಟ ಅತ್ಯಂತ ಪ್ರತಿಭಾನ್ವಿತ ಕಲಾವಿದರಲ್ಲಿ ಮಳವಳ್ಳಿ ಸುಂದರಮ್ಮ ಬಹುಮುಖ್ಯರು. ತಮ್ಮ ಗಾಯನ, ಅಭಿನಯ ಮತ್ತು ಸೌಂದರ್ಯದಿಂದ ಸಹಸ್ರಾರು ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದ ಅಭಿನೇತ್ರಿ. ನಟಿಯಾಗಿ ಮಾತ್ರವಲ್ಲದೇ ಕಂಪನಿ ಮಾಲೀಕರಾಗಿ ನೂರಾರು ಕಲಾವಿದರಿಗೆ ದಾರಿದೀಪವಾಗಿದ್ದರು. ಕೈಲಾಸಂ ಅವರಂತಹ ನಾಟಕಕಾರರು ಮಾತ್ರವಲ್ಲ, ಮೈಸೂರು ಮಹಾರಾಜರೂ ಸಹ ಮಳವಳ್ಳಿ ಸುಂದರಮ್ಮನವರ ಅಭಿನಯಕ್ಕೆ ಮಾರು ಹೋದವರು. ಪ್ರಸ್ತುತ ಮಳವಳ್ಳಿ ಸುಂದರಮ್ಮ ಅವರ ಆತ್ಮಕತೆಯನ್ನು ಹ.ವೆಂ. ಸೀತಾರಾಮಯ್ಯನವರು ರಚಿಸಿದ್ದಾರೆ.
ಪತ್ರಕರ್ತ, ಸಾಹಿತಿ ಹ.ವೆಂ. ಸೀತಾರಾಮಯ್ಯ ಅವರು ಕಾದಂಬರಿಗಳು ಹೆಚ್ಚು ಜನಪ್ರಿಯವಾಗಿದ್ದ ಕಾಲದಲ್ಲಿ ಜೀವನ ಚರಿತ್ರೆಗಳನ್ನು ಓದುಗರಿಗೆ ಪರಿಚಯಿಸಿದವರು. ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಕುರಿತು ಕೆಲಸ ಮಾಡಿದ ಸಾಧಕರ ಜೀವನ ಚರಿತ್ರೆಗಳ ರಚನೆಯ ಮೂಲಕ ವಿಶಿಷ್ಠ ವ್ಯಕ್ತಿಗಳ ಬದುಕು-ಸಾಧನೆಗಳನ್ನು ಪರಿಚಯಿಸಿದವರು. ಇವರು ಕರ್ನಾಟಕ ರಂಗಭೂಮಿ ಎಂಬ ಉದ್ಗ್ರಂಥವನ್ನೂ, ಇದು ನನ್ನ ಕಥೆ, ಅಭಿನಯ ಶಾರದೆ, ಪ್ರತಿಭಾನ್ವಿತರು ಎಂಬ ಕಿರುಕೃತಿಗಳನ್ನೂ ರಚಿಸಿದ್ದಾರೆ.. ...
READ MORE