ಕಿರಂ ಎಂತಲೇ ಪರಿಚಿತರಾಗಿರುವ ಕಿ.ರಂ. ನಾಗರಾಜು ಅವರ ಕುರಿತು ಬರೆದಿರುವ ಜೀವನ ಚಿತ್ರವೇ ಕಿರಂ ಲೋಕ. ಕನ್ನಡ ಸಾಹಿತ್ಯ ಮೀಮಾಂಸೆ ಅಥವಾ ಕನ್ನಡ ಕಾವ್ಯ ಮೀಮಾಂಸೆಯನ್ನು ಕಟ್ಟಲು ಪ್ರಯತ್ನಿಸಿದವರು ಕಿರಂ. ಅವರ ಎಲ್ಲಾ ಲೇಖನಗಳಲ್ಲಿ ಕನ್ನಡ ಸಾಹಿತ್ಯ ಮೀಮಾಂಸೆ ಕುರಿತ ಚರ್ಚೆ ನಡೆದಿದೆ. ಈ ಕೃತಿಯಲ್ಲಿ ಶೂದ್ರ ಶ್ರೀನಿವಾಸ್ ಅವರು ಕಿರಂ ಅವರ ಸಾಧನೆಗಳಲ್ಲಿ ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಸಮಗ್ರ ವ್ಯಕ್ತಿತ್ವದ ನೆಲೆಯಲ್ಲಿ ರೂಪಿಸಿದ್ದಾರೆ. ಕಿರಂ ಅವರ ಬದುಕಿನೊಂದಿಗೆ ತಮ್ಮ ಅನುಭವದ ಸಾಮರಸ್ಯವನ್ನು ಅನುಸಂಧಾನಗೊಳಿಸಿ ಸಮಷ್ಠಿಯ ರೂಪದಲ್ಲಿ ಕಿರಂ ಅವರ ಜೀವನ ಚಿತ್ರವನ್ನು ವಿವರಿಸಿದ್ದಾರೆ.
ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...
READ MORE