ಪಾ.ಶ. ಶ್ರೀನಿವಾಸ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ಕನ್ನಡ ಹಾಗೂ ತಮಿಳು ಭಾಷಾ ಸಾಹಿತ್ಯದ ಕೊಂಡಿಯಾಗಿ ಹತ್ತು ಹಲವು ಪುಸ್ತಕಗಳನ್ನು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದ ಮಹತ್ವದ ಪುಸ್ತಕಗಳನ್ನು ತಮಿಳಿಗೆ ಭಾಷಾಂತರಿಸಿದ್ದಾರೆ. ವ್ಯಕ್ತಿಯಾಗಿ, ಸಾಹಿತಿಯಾಗಿ ಹಾಗೂ ಸಾಂಸ್ಕೃತಿಕ ಸೇತು ಎಂತಿರುವ .ಶ. ಶ್ರೀನಿವಾಸ ಅವರ ಬದುಕು-ಸಾಹಿತ್ಯಕ ಸಾಧನೆಗಳನ್ನು ಲೇಖಕ ಎ. ಮೋಹನ ಕುಂಟಾರ್ ಅವರು ಬರೆದ ಕೃತಿ-ಪಾ.ಶ. ಶ್ರೀನಿವಾಸ. .
ಡಾ. ಎ. ಮೋಹನ್ ಕುಂಟಾರ್ ಅವರು 25-05-1963ರಂದು ಜನಿಸಿದರು. ಬಿ.ಎ, ಎಂ.ಎ, ಎಂ.,ಫಿಲ್ ಪದವೀಧರರು. ಮಲೆಯಾಳಂ ಭಾಷೆಯಲ್ಲಿ ಸರ್ಟಿಫಿಕೆಟ್, ತಮಿಳು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ತೆಲುಗು ಭಾಷೆಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಮತ್ತು ಯಕ್ಷಗಾನ ಪ್ರಮುಖ ಆಸಕ್ತಿ ಕ್ಷೇತ್ರಗಳು. ಕೇರಳ ಕಥನ, ಸಮುದಾಯಗಳ ಕನ್ನಡ ಪರಂಪರೆ, ಕನ್ನಡ ಮಲೆಯಾಳಂ ಭಾಷಾಂತರ ಪ್ರಕ್ರಿಯೆ ಇವರ ಪ್ರಮುಖ ಪ್ರಕಟಣೆಗಳು. ಕನ್ನಡ ಅನುವಾದ ಸಾಹಿತ್ಯ,”ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು’ ಪ್ರಮುಖ ಸಂಶೋಧನಾ ಲೇಖನಗಳಾಗಿವೆ. ...
READ MORE