ಲಂಕೇಶ್‌ ಬದುಕು ಬರೆಹ

Author : ಕೆ. ಮರುಳಸಿದ್ದಪ್ಪ

Pages 164

₹ 120.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ. ಗಾಂಧಿನಗರ, ಬೆಂಗಳೂರು
Phone: 0804011 4455

Synopsys

ಸಾಹಿತಿ, ಪತ್ರಕರ್ತ ಲಂಕೇಶರ ಬದುಕು ಬರೆಹ ಕುರಿತು ಹಲವು ಕೃತಿಗಳು ಬಂದಿವೆ. ಸದ್ಯದ "ಲಂಕೇಶರ ಬದುಕು ಬರೆಹ’ ಕುರಿತು ಸಾಹಿತಿ ಕೆ.ಮರುಳಸಿದ್ದಪ್ಪ ಅವರು ತಾವು ಲಂಕೇಶರನ್ನು ವ್ಯಕ್ತಿಗತವಾಗಿ ಕಂಡಂತೆ ಹಾಗೂ ಲಂಕೇಶರ ಬರೆಹಗಳ ಮೂಲಕ ಲಂಕೇಶರನ್ನು ಕಂಡಂತೆ ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಕೃತಿಯ ವೈಶಿಷ್ಟ್ಯ.

ಲಂಕೇಶ್ ಹಾಗೂ ಅವರ ಬರೆಹಗಳ ಕುರಿತ ಅಭಿಪ್ರಾಯ ರೂಪದ ಲೇಖನಗಳ ಸಂಗ್ರಹ ಕೃತಿ ಎನ್ನಬಹುದು. ಲಂಕೇಶ್‌ ವಾರಪತ್ರಿಕೆಯಲ್ಲಿ ಅಂಕಣಕಾರರಾಗಿಯೂ ಇದ್ದ ಲೇಖಕರು, ತೀರಾ ಹತ್ತಿರದಿಂದ ಲಂಕೇಶ್ ರನ್ನು ಬಲ್ಲವರು. ಹೀಗಾಗಿ, ಇಲ್ಲಿಯ ಬರೆಹಗಳು ಮೌಲಿಕ ಎನ್ನಬಹುದು.

 

About the Author

ಕೆ. ಮರುಳಸಿದ್ದಪ್ಪ
(12 January 1940)

ಡಾ. ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ದ್ದರು. ಭಾರತೀಯ ಜಾನಪದ ಸಮೀಕ್ಷೆ, ಲಾವಣಿಗಳು, ಷಟ್ಟದಿ, ಜಾನಪದ ಸಾಹಿತ್ಯ ರಚನಕಾರರು, ಕನ್ನಡ ನಾಟಕ ಸಮೀಕ್ಷೆ, ನೋಟನಿಲುವು, ರಕ್ತಕಣಗೀತೆ ಅವರ ಪ್ರಕಟಿತ ಪುಸ್ತಕಗಳು. 'ಆಧುನಿಕ ಕನ್ನಡ ನಾಟಕ ವಿಮರ್ಶೆ' ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುವ ಅವರು  ಹಲವು ಇಂಗ್ಲೀಷ್ ನಾಟಕಗಳನ್ನು ಕನ್ನಡೀಕರಿಸಿದ್ದಾರೆ. ಕಿ.ರಂ. ನಾಗರಾಜ ಅವರ ಜೊತೆ ಸೇರಿ ’ವಚನ ಕಮ್ಮಟ’ ಸಂಪಾದಿಸಿದ್ದಾರೆ. ...

READ MORE

Related Books